BREAKING: ಹಾಡಹಗಲೇ ತನಿಷ್ಕ್ ಆಭರಣ ಮಳಿಗೆಯಿಂದ 25 ಕೋಟಿ ರೂ. ಮೌಲ್ಯದ ಚಿನ್ನ ಲೂಟಿ | VIDEO

ಪಾಟ್ನಾ: ಬಿಹಾರದ ಅರ್ರಾದಲ್ಲಿರುವ ತನಿಷ್ಕ್ ಆಭರಣ ಶೋರೂಂ ಮೇಲೆ ಶಸ್ತ್ರಸಜ್ಜಿತ ದರೋಡೆಕೋರರು ನುಗ್ಗಿ 25 ಕೋಟಿ ರೂ. ಮೌಲ್ಯದ ಆಭರಣಗಳನ್ನು ದೋಚಿದ್ದಾರೆ.

ಶೋರೂಂನೊಳಗಿನ ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ದರೋಡೆ ಅರ್ರಾ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಗೋಪಾಲಿ ಚೌಕ್ ಶಾಖೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಶೋರೂಂ ವ್ಯವಸ್ಥಾಪಕ ಕುಮಾರ್ ಮೃತ್ಯುಂಜಯ್ ಪ್ರಕಾರ, ನಗದು ಜೊತೆಗೆ, ದರೋಡೆಕೋರರು ಚಿನ್ನದ ಸರಗಳು, ನೆಕ್ಲೇಸ್‌ಗಳು, ಬಳೆಗಳು ಮತ್ತು ಕೆಲವು ವಜ್ರಗಳು ಸೇರಿದಂತೆ ಹಲವಾರು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.

25 ಕೋಟಿ ರೂ. ಮೌಲ್ಯದ ಆಭರಣಗಳನ್ನು ಲೂಟಿ ಮಾಡಲಾಗಿದೆ, ಅದರ ಜೊತೆಗೆ ನಗದು, ಸರ, ನೆಕ್ಲೇಸ್‌ಗಳು, ಬಳೆಗಳು ಮತ್ತು ಕೆಲವು ವಜ್ರಗಳು ಲೂಟಿ ಮಾಡಲಾಗಿದೆ. ಇದು ಅಧಿಕಾರಿಗಳ ನಿರ್ಲಕ್ಷ್ಯ. ಅದು ಸಂಜೆ ಅಥವಾ ರಾತ್ರಿ ಅಲ್ಲ, ಬೆಳಗಿನ ಸಮಯ. ನಾವು ಪೊಲೀಸರಿಗೆ ಕರೆ ಮಾಡುತ್ತಿದ್ದೆವು, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕುಮಾರ್ ದೂರಿದ್ದಾರೆ.

ಶೋರೂಂನ ಇಬ್ಬರು ಕಾರ್ಯನಿರ್ವಾಹಕರು ದಾಳಿಯಲ್ಲಿ ಗಾಯಗೊಂಡಿದ್ದಾರೆ ಮತ್ತು ದರೋಡೆಕೋರರು ಅವರ ತಲೆಗೆ ರಿವಾಲ್ವರ್‌ಗಳಿಂದ ಹೊಡೆದಿದ್ದಾರೆ. ದರೋಡೆಯಲ್ಲಿ ಕನಿಷ್ಠ ಎಂಟು ದರೋಡೆಕೋರರು ಭಾಗಿಯಾಗಿದ್ದಾರೆ ಎಂದು ಕುಮಾರ್ ಹೇಳಿದರು.

ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಲ್ಲಿ 8-9 ಜನರು ಒಳಗೆ ನುಗ್ಗಿ ಕಾವಲುಗಾರರು ಮತ್ತು ಶೋರೂಂ ಒಳಗೆ ಇದ್ದ ನೌಕರರನ್ನು ಬೆದರಿಸಿದ್ದಾರೆ. ನಂತರ ದರೋಡೆಕೋರರು ಕೌಂಟರ್‌ನಲ್ಲಿದ್ದ ಹಣವನ್ನು ಮತ್ತು ಹಲವಾರು ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read