ಹೆದ್ದಾರಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕಡಿಮೆ ಟೋಲ್ ಶುಲ್ಕಕ್ಕೆ ‘ರಾಜಮಾರ್ಗ ಯಾತ್ರಾ’ ಆ್ಯಪ್ ಬಿಡುಗಡೆ

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದಿಂದ ‘ರಾಜಮಾರ್ಗ ಯಾತ್ರಾ’ ಎನ್ನುವ ನೂತನ ಆ್ಯಪ್ ಬಿಡುಗಡೆ ಮಾಡಲಾಗಿದೆ.

ಈ ಆ್ಯಪ್ ನಲ್ಲಿ ದೇಶದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಮಾಹಿತಿ ಇದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವವರಿಗೆ ಈ ಆ್ಯಪ್ ಮಾರ್ಗದರ್ಶಿಯಾಗಿದೆ. ಪ್ರಯಾಣಿಕರಿಗೆ ಸುಖಕರ ಪ್ರಯಾಣದ ಅನುಭವ ನೀಡುತ್ತದೆ. ಟೋಲ್ ಕಡಿಮೆ ಇರುವ ಪರ್ಯಾಯ ಮಾರ್ಗಗಳ ಮಾಹಿತಿಯನ್ನು ಕೂಡ ನೀಡುತ್ತದೆ ಎಂದು ಹೆದ್ದಾರಿ ಪ್ರಾದಿಕಾರ ತಿಳಿಸಿದೆ.

ಈ ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಸದ್ಯ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಇದು ಲಭ್ಯವಿದ್ದು, ಬಳಕೆದಾರರ ಸ್ನೇಹಿ ಆಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವವರ ಸಮಸ್ಯೆಯನ್ನು ಕೂಡ ಪರಿಹರಿಸಲಿದೆ. ಹವಾಮಾನ ವರದಿ, ಹತ್ತಿರದ ಟೋಲ್ ಗಳು, ಪೆಟ್ರೋಲ್ ಬಂಕ್,  ಆಸ್ಪತ್ರೆ, ಹೋಟೆಲ್ ಗಳು ಮತ್ತು ಟ್ರಾಫಿಕ್ ಬಗೆಗಿನ ಮಾಹಿತಿಯನ್ನು ನೀಡುತ್ತದೆ. ರಾಷ್ಟ್ರೀಯ ಹೆದ್ದಾರಿ ಕುರಿತಾದ ಯಾವುದೇ ದೂರುಗಳಿದ್ದಲ್ಲಿ ಈ ಅಪ್ಲಿಕೇಶನ್ ನಲ್ಲಿ ದಾಖಲಿಸಬಹುದು. ಎಲ್ಲ ಬ್ಯಾಂಕುಗಳನ್ನು ಈ ಆ್ಯಪ್ ನಲ್ಲಿ ಸಂಯೋಜಿತಗೊಳಿಸಿದ್ದು, ವಾಹನಗಳ ಫಾಸ್ಟ್ ಟ್ಯಾಗ್ ರಿಚಾರ್ಜ್ ಮಾಡಲು ಅನುಕೂಲವಾಗುವಂತೆ ರೂಪಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read