ʼಓವರ್ ಟೇಕ್ʼ ಮಾಡಿದ್ದಕ್ಕೆ ಕಾರು ಚಾಲಕನ‌ ಮೇಲೆ ಬೈಕ್ ಸವಾರರ ಹಲ್ಲೆ; ಡ್ಯಾಶ್‌ ಕ್ಯಾಮ್‌ ನಲ್ಲಿ ಶಾಕಿಂಗ್‌ ಕೃತ್ಯ ಸೆರೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಡಿ ರೌಡಿಗಳ ಹಾವಳಿ ಜೋರಾಗಿದೆ. ಇದೀಗ ನಗರದ ರಸ್ತೆಯೊಂದರಲ್ಲಿ ಬೈಕ್ ಸವಾರರು ರೌಡಿಸಂ ಪ್ರದರ್ಶಿಸಿದ ಘಟನೆ ನಡೆದಿದ್ದು, ಈ ದೃಶ್ಯ ಕಾರಿನ ಡ್ಯಾಶ್ ಕ್ಯಾಮ್ ನಲ್ಲಿ ಸೆರೆಯಾಗಿದೆ.

ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ದ್ವಿಚಕ್ರ ವಾಹನ ಸವಾರರು ಅಡ್ಡಿಪಡಿಸಿದ್ದಾರೆ. ಕಾರು ಕೇರಳದ ನೋಂದಣಿಯನ್ನು ಹೊಂದಿದ್ದು, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದವರು ಗೂಂಡಾಗಿರಿ ತೋರಿದ್ದಾರೆ. ಈ ಮಾರ್ಗದಲ್ಲಿ ಬೈಕ್ ಸವಾರರೊಬ್ಬರನ್ನು ಹಾರ್ನ್ ಮಾಡಿ ಹಿಂದಿಕ್ಕಿದ್ದಕ್ಕಾಗಿ ಕಾರಿನ ಚಾಲಕನನ್ನು ಬೆದರಿಸಿದ್ದಾರೆ. ಕಾರು ಚಾಲಕ, ಬೈಕ್ ಸವಾರರ ಬಳಿ ಚಾಲಕ ಕ್ಷಮೆಯಾಚಿಸಿದರೂ ನಡುರಸ್ತೆಯಲ್ಲೇ ನಿಲ್ಲಿಸಿ ಆತನೊಂದಿಗೆ ವಾಗ್ವಾದ ನಡೆಸಿದರು.

ಆದರೆ, ತನ್ನ ಸುರಕ್ಷತೆಗಾಗಿ ಕಾರನ್ನು ರಿವರ್ಸ್ ಮಾಡಿ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಈ ಇಡೀ ಘಟನೆ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ. ವರ್ತೂರ್ ಅನ್ನು ಸಂಪರ್ಕಿಸುವ ಹೊಸದಾಗಿ ನಿರ್ಮಿಸಲಾದ ರಸ್ತೆಯಲ್ಲಿ ಚಾಲನೆ ಮಾಡುವಾಗ ಬೈಕ್ ಸವಾರರು ಗಲಾಟೆ ಮಾಡಿದ್ದಾರೆ.

ಈ ಬಗ್ಗೆ ಪೊಲೀಸರ ಗಮನ ಸೆಳೆಯಲು ಡ್ಯಾಶ್‌ಕ್ಯಾಮ್ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಕೂಡಲೇ ಕ್ರಮ ಕೈಗೊಂಡ ಪೊಲೀಸರು, ಎಫ್‌ಐಆರ್ ದಾಖಲಿಸಿ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

ಈ ಬಗ್ಗೆ ಉಪ ಪೊಲೀಸ್ ಆಯುಕ್ತ (ವೈಟ್‌ಫೀಲ್ಡ್ ವಿಭಾಗ) ಎಸ್. ಗಿರೀಶ್ ಟ್ವೀಟ್ ಮಾಡಿದ್ದಾರೆ. ಗುರುವಾರ ಮಧ್ಯಾಹ್ನ ಘಟನೆ ನಡೆದ ಗಂಟೆಗಳ ನಂತರ ಆರೋಪಿಗಳನ್ನು ಕಳೆದ ರಾತ್ರಿ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

https://twitter.com/ronmania2009/status/1679482374776832002?ref_src=twsrc%5Etfw%7Ctwcamp%5Etweetembed%7Ctwterm%5E1679689407497138177%7Ctwgr%5Ec86bb90ab70595c2a71960788b7bf239bc460ed3%7Ctwcon%5Es2_&ref_url=https%3A%2F%2Fwww.freepressjournal.in%2Fviral%2Froad-rage-caught-on-dashcam-bikers-block-kerala-cars-way-to-display-hooliganism-in-bengaluru-police-arrest-miscreants-after-video-goes-viral

https://twitter.com/dcpwhitefield/status/1679689407497138177?ref_src=twsrc%5Etfw%7Ctwcamp%5Etweetembed%7Ctwterm%5E1679689407497138177%7Ctwgr%5Ec86bb90ab70595c2a71960788b7bf239bc460ed3%7Ctwcon%5Es1_&ref_url=https%3A%2F%2Fwww.freepressjournal.in%2Fviral%2Froad-rage-caught-on-dashcam-bikers-block-kerala-cars-way-to-display-hooliganism-in-bengaluru-police-arrest-miscreants-after-video-goes-viral

https://twitter.com/Navaneethakss/status/1679505163734900736?ref_src=twsrc%5Etfw%7Ctwcamp%5Etweetembed%7Ctwterm%5E1679528894993670144%7Ctwgr%5Ec86bb90ab70595c2a71960788b7bf239bc460ed3%7Ctwcon%5Es2_&ref_url=https%3A%2F%2Fwww.freepressjournal.in%2Fviral%2Froad-rage-caught-on-dashcam-bikers-block-kerala-cars-way-to-display-hooliganism-in-bengaluru-police-arrest-miscreants-after-video-goes-viral

https://twitter.com/badriprusty/status/1679528894993670144?ref_src=twsrc%5Etfw%7Ctwcamp%5Etweetembed%7Ctwterm%5E1679528894993670144%7Ctwgr%5Ec86bb90ab70595c2a71960788b7bf239bc460ed3%7Ctwcon%5Es1_&ref_url=https%3A%2F%2Fwww.freepressjournal.in%2Fviral%2Froad-rage-caught-on-dashcam-bikers-block-kerala-cars-way-to-display-hooliganism-in-bengaluru-police-arrest-miscreants-after-video-goes-viral

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read