BIG NEWS: ವಾಹನ ಅಡ್ಡಗಟ್ಟಿ ಗಲಾಟೆ ಮಾಡುವವರಿಗೆ ಕಮಿಷ್ನರ್ ಖಡಕ್ ವಾರ್ನಿಂಗ್

ಬೆಂಗಳೂರು: ವಾಹನಗಳನ್ನು ಅಡ್ಡಗಟ್ಟಿ ಗಲಾಟೆ ಮಾಡುವುದು, ಹಲ್ಲೆ ನಡೆಸುವ ಕಿಡಿಗೇಡಿಗಳಿಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಇನ್ಮುಂದೆ ವಾಹನ ಅಡ್ಡಗಟ್ಟಿ ಗಲಾಟೆ ಮಾಡುವವರ ವಿರುದ್ಧ ರೌಡಿಶೀಟರ್ ಓಪನ್ ಆಗಲಿದೆ. ಸರಣಿ ರೋಡ್ ರೇಜ್ ಕೇಸ್ ಗಳು ದಾಖಲಾಗಲಿವೆ ಎಂದು ಪೊಲಿಸ್ ಕಮಿಷ್ನರ್ ದಯಾನಂದ್ ಎಚ್ಚರಿಕೆ ನೀಡಿದ್ದಾರೆ.

ರಾಜಧಾನಿ ಬೆಂಗಳೂರು, ಬೆಂಗಳೂರಿನ ಹೊರವಲಯಗಳ ರಸ್ತೆಯಲ್ಲಿ ಪುಂಡರು, ಕಿಡಿಗೇಡಿಗಳು ವಾಹನಗಳನ್ನು ಅಡ್ಡಗಟ್ಟಿ ಕಿರಿಕ್ ಮಾಡುವುದು, ಕಲ್ಲುಗಳನ್ನು ಎತ್ತಿಹಾಕಿ ವಾಹನಗಳನ್ನು ಜಖಂಗೊಳಿಸುವುದು ಇಂತಹ ನೂರಾರು ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿತ್ತಿತ್ತು. ಈ ಹಿನ್ನಲೆಯಲ್ಲಿ ಪುಡಿರೌಡಿಗಳಿಗೆ ಕಡಿವಾಣ ಹಾಕಲು ಬೆಂಗಳೂರು ನಗರ ಪೊಲೀಸರು ಸಜ್ಜಾಗಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read