ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆಗುಂಡಿ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರಿನಲ್ಲಿ ಮಾತ್ರವಲ್ಲ, ದೆಹಲಿಯಲ್ಲಿಯೂ ರಸ್ತೆಗುಂಡಿಗಳಿವೆ. ಪ್ರಧಾನಿ ಮೋದಿ ಮನೆ ಮುಂದೆಯೂ ಗುಂಡಿಗಳಿವೆ ಎಂದು ಹೇಳಿದ್ದರು. ಡಿಸಿಎಂ ಅವರ ಈ ಹೇಳಿಕೆ ಇದೀಗ ವಿಪಕ್ಷ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಡಿ.ಕೆ.ಶಿವಕುಮಾರ್ ಹೇಳಿಕೆಗೆ ಮಾಜಿ ಲೋಕೋಪಯೋಗಿ ಸಚಿವ, ಬಿಜೆಪಿ ನಾಯಕ ಸಿ.ಸಿ.ಪಾಟೀಲ್, ಕೆರಳಿ ಕೆಂಡವಾಗಿದ್ದಾರೆ.
ಪ್ರಧಾನಿ ಮನೆ ಮುಂದೆ ಗುಂಡಿ ಇದ್ದರೆ ಡಿಕೆಶಿ ಮನೆ ಮುಂದೆ ಹೊಂಡ ಮಾಡಿಕೊಳ್ಳಲು ಹೇಳಿ. ಇವರ ಮನೆ ಮುಂದೆ ಒಂದು ಲೇಕ್ ಮಾಡಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.
ಏನು ಕೇಳಿದ್ರೂ ಮೋದಿ ಮಾಡಿಲ್ಲ, ಬಿಜೆಪಿಯವರು ಇದ್ದಾಗ ಮಾಡಿಲ್ಲ ಎನ್ನುತ್ತಾರೆ. ನಾವು ಇದ್ದಾಗ ಮಾಡಿಲ್ಲ ಎನ್ನಲು ಈಗ ನೀವು ಅಧಿಕಾರಕ್ಕೆ ಬಂದಿದ್ದೀರಾ. ನೀವು ಏನು ಮಾಡುತ್ತಿದ್ದೀರಾ? ಮತ್ತೆ ನೀವು ಹೋಗಲು ತಯಾರಾಗಿ, ಮತ್ತೆ ನಾವು ಬರುತ್ತೇವೆ ಎಂದಿದ್ದಾರೆ.