ಉದ್ಯಮಿ ಕೊಟ್ಟ ಟಾಸ್ಕ್‌ ಅನ್ನು 6 ಪ್ರಯತ್ನಗಳಲ್ಲಿ ಪರಿಹರಿಸಿದ ನಟ…..!

ಆರ್​.ಪಿ.ಜಿ. ಎಂಟರ್‌ಪ್ರೈಸಸ್ ಅಧ್ಯಕ್ಷ, ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಇರುತ್ತಾರೆ. ದೇಶದ ಗುಪ್ತ ಪ್ರತಿಭೆಗಳನ್ನು ಎತ್ತಿ ತೋರಿಸುವ ರಸಪ್ರಶ್ನೆಗಳು, ಸಂಗತಿಗಳು ಅಥವಾ ವೀಡಿಯೊಗಳನ್ನು ಹಂಚಿಕೊಳ್ಳಲು ಇಷ್ಟಪಡುವ ಉದ್ಯಮಿ ಈಗ ಇಂಥದ್ದೇ ಒಂದು ಸಮಸ್ಯೆಯನ್ನು ಮುಂದಿಟ್ಟಿದ್ದಾರೆ.

ಅವರು ತಮ್ಮ ಟ್ವಿಟ್ಟರ್ ಅನುಯಾಯಿಗಳನ್ನು ಪಝಲ್ ಚಾಲೆಂಜ್ ಮೂಲಕ ಕುತೂಹಲ ಕೆರಳಿಸಿದ್ದಾರೆ. ಹರ್ಷ್ ಗೋಯೆಂಕಾ ಅವರು ಪದಬಂಧದ ಚಿತ್ರವನ್ನು ಒಳಗೊಂಡಿರುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಬಳಕೆದಾರರು ಕೇವಲ 10 ಸೆಕೆಂಡುಗಳಲ್ಲಿ ‘ಲಾರ್ಜ್’ ಪದದ ಸರಿಯಾದ ಕಾಗುಣಿತವನ್ನು ಗುರುತಿಸಬೇಕು. ಈ ಒಗಟು ನಟ ರಿತೇಶ್ ದೇಶಮುಖ್ ಸೇರಿದಂತೆ ಹಲವರ ಗಮನ ಸೆಳೆದಿದೆ.

ನಟ ಕಾಮೆಂಟ್‌ಗಳ ವಿಭಾಗದಲ್ಲಿ ಈ ಒಗಟು ಪರಿಹರಿಸಲು “ಆರು ಪ್ರಯತ್ನಗಳನ್ನು” ತೆಗೆದುಕೊಂಡಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಪಝಲ್ ಗೇಮ್‌ನ ಚಿತ್ರವು ‘ದೊಡ್ಡದು’ (Large) ಎಂಬ ಪದದ ಎಲ್ಲಾ ತಪ್ಪು ಕಾಗುಣಿತಗಳ ನಡುವೆ ಕೇವಲ ಒಂದು ಸರಿಯಾದ ಕಾಗುಣಿತವನ್ನು ಹೊಂದಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಒಗಟು ಪರಿಹರಿಸಲು ಪ್ರಾರಂಭಿಸಿದ್ದು, ಕಾಮೆಂಟ್‌ಗಳ ವಿಭಾಗದಲ್ಲಿ ಒಗಟನ್ನು ಬಿಡಿಸಲು ಎಷ್ಟು ಸಮಯ ತೆಗೆದುಕೊಂಡಿತು ಎಂದು ಅವರು ಬರೆಯುತ್ತಿದ್ದಾರೆ. ನೀವೂ ಒಮ್ಮೆ ಟ್ರೈ ಮಾಡಿ.

https://twitter.com/hvgoenka/status/1622195603022442497?ref_src=twsrc%5Etfw%7Ctwcamp%5Etweetembed%7Ctwterm%5E1622195603022442497%7Ctwgr%5E2c97e49a2abbcf486fd2349211a2449a48735e53%7Ctwcon%5Es1_&ref_url=https%3A%2F%2Fwww.news18.com%2Fbuzz%2Friteish-deshmukh-solves-harsh-goenkas-10-seconds-puzzle-in-6-attempts-7010791.html

https://twitter.com/Riteishd/status/1622216867460026370?ref_src=twsrc%5Etfw%7Ctwcamp%5Etweetembed%7Ctwterm%5E1622258421579022336%7Ctwgr%5E2c97e49a2abbcf486fd2349211a2449a48735e53%7Ctwcon%5Es2_&ref_url=https%3A%2F%2Fwww.news18.com%2Fbuzz%2Friteish-deshmukh-solves-harsh-goenkas-10-seconds-puzzle-in-6-attempts-7010791.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read