ಅಕ್ಷರಧಾಮಕ್ಕೆ ಭೇಟಿ ನೀಡಲಿದ್ದಾರೆ ಬ್ರಿಟನ್ ಪ್ರಧಾನಿ ರಿಷಿ ಸುನಕ್

ನವದೆಹಲಿ: ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್, ನಾಳೆ ಭಾನುವಾರ ದೆಹಲಿಯ ಅಕ್ಷರಧಾಮಕ್ಕೆ ಭೇಟಿ ನೀಡಲಿದ್ದಾರೆ.

ಜಿ 20 ಶೃಂಗಸಭೆ ಹೊತ್ತಿನಲ್ಲಿ ಇಲ್ಲಿನ ದೇವಾಲಯಗಳಿಗೂ ಭೇಟಿ ನೀಡಲು ಇಚ್ಚಿಸುವುದಾಗಿ ರಿಷಿ ಸುನಕ್ ತಿಳಿಸಿದ್ದಾರೆ. ಅಲ್ಲದೇ ನಾನು ಹೆಮ್ಮೆಯ ಹಿಂದೂ. ನಾವು ರಕ್ಷಾಬಂಧನವನ್ನು ಆಚರಿಸುತ್ತೇವೆ. ನನ್ನ ಸಹೋದರಿ ಹಾಗೂ ಸಹೋದರ ಸಂಬಂಧಿಗಳು ಕಟ್ಟಿದ ರಾಖಿ ನನ್ನ ಬಳಿ ಇದೆ. ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಸಮಯವಿರಲಿಲ್ಲ. ಇಲ್ಲಿನ ಮಂದಿರಗಳಿಗೆ ಭೇಟಿ ನೀಡುವ ಮೂಲಕ ಅದನ್ನು ಸರಿದೂಗಿಸಬಹುದು. ನಂಬಿಕೆ ಎಂಬುದು ಬಹಳ ಮುಖ್ಯವಾದದ್ದು. ಅದು ಒತ್ತಡದ ಸಮಯದಲ್ಲಿ ಶಕ್ತಿ ಹಾಗೂ ಸ್ಥಿತಿಸ್ಥಾಪಕತ್ವವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ನಾಳೆ ಬೆಳಿಗ್ಗೆ ರಿಷಿ ಸುನಕ್ ಪತ್ನಿ ಜೊತೆ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read