ಜಿ20 ಶೃಂಗಸಭೆ: ‘UK ನಲ್ಲಿ ಖಲಿಸ್ತಾನಿ ಉಗ್ರವಾದ ಸಹಿಸುವುದಿಲ್ಲ’: ರಿಷಿ ಸುನಕ್

ನವದೆಹಲಿ: G20 ಶೃಂಗಸಭೆಗಾಗಿ ದೆಹಲಿಯಲ್ಲಿರುವ ಯುನೈಟೆಡ್ ಕಿಂಗ್‌ಡಂ ಪ್ರಧಾನಿ ರಿಷಿ ಸುನಕ್, UK ನಲ್ಲಿ ಖಲಿಸ್ತಾನಿ ಉಗ್ರವಾದವನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಖಲಿಸ್ತಾನ್ ಪರ ಉಗ್ರವಾದದ ಬಗ್ಗೆ ಕೇಳಿದಾಗ, ಯಾವುದೇ ರೀತಿಯ ಹಿಂಸಾಚಾರ ಅಥವಾ ಉಗ್ರವಾದ ದೇಶದಲ್ಲಿ ಸ್ವೀಕಾರಾರ್ಹವಲ್ಲ ಎಂದು ಹೇಳಿದರು.

ಯುಕೆಯಲ್ಲಿ ಯಾವುದೇ ರೀತಿಯ ಉಗ್ರವಾದ ಅಥವಾ ಹಿಂಸಾಚಾರವು ಸ್ವೀಕಾರಾರ್ಹವಲ್ಲ ಎಂದು ನಾನು ನಿಸ್ಸಂದಿಗ್ಧವಾಗಿ ಹೇಳುತ್ತೇನೆ. PKE(ಖಾಲಿಸ್ತಾನಿ ಪರ ಉಗ್ರವಾದ)ವನ್ನು ಎದುರಿಸಲು ಯುಕೆ ಭಾರತ ಸರ್ಕಾರದೊಂದಿಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಇದು (PKE) ಸರಿ ಎಂದು ನಾನು ಭಾವಿಸುವುದಿಲ್ಲ. ನಮ್ಮ ಭದ್ರತಾ ಸಚಿವರು ಇತ್ತೀಚೆಗೆ ಭಾರತದಲ್ಲಿ ತಮ್ಮ ಸಹವರ್ತಿಗಳೊಂದಿಗೆ ಮಾತನಾಡುತ್ತಿದ್ದರು. ನಾವು ಗುಪ್ತಚರ ಮತ್ತು ಮಾಹಿತಿಯನ್ನು ಹಂಚಿಕೊಳ್ಳಲು ಒಟ್ಟಾಗಿ ಕಾರ್ಯನಿರತ ಗುಂಪುಗಳನ್ನು ಹೊಂದಿದ್ದೇವೆ. ಇದರಿಂದ ನಾವು ಈ ರೀತಿಯ ಹಿಂಸಾತ್ಮಕ ಉಗ್ರವಾದವನ್ನು ಬೇರುಸಹಿತ ತೆಗೆಯಬಹುದು ಎಂದು ಅವರು ಹೇಳಿದ್ದಾರೆ.

ಜಿ 20 ನಾಯಕರ ಶೃಂಗಸಭೆಗಾಗಿ ದೆಹಲಿಗೆ ಆಗಮಿಸಿದ ಸ್ವಲ್ಪ ಸಮಯದ ನಂತರ ಸುನಕ್ ಅವರ ಹೇಳಿಕೆ ಹೊರಬಂದಿದೆ.

ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಆಗಮಿಸಿದ ಸುನಕ್ ಅವರನ್ನು ಕೇಂದ್ರ ಸಚಿವ ಅಶ್ವಿನಿ ಚೌಬೆ, ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಮತ್ತು ಹಿರಿಯ ರಾಜತಾಂತ್ರಿಕರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಈ ವರ್ಷದ ಮಾರ್ಚ್‌ನಲ್ಲಿ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ಖಲಿಸ್ತಾನ್ ಪರರು ದಾಳಿ ಮಾಡಿದ್ದು, ಭಾರತೀಯ ತ್ರಿವರ್ಣ ಧ್ವಜವನ್ನು ಕಟ್ಟಡದ ಮುಂಭಾಗದ ಕಂಬದಿಂದ ಕೆಳಗೆ ಎಳೆಯಲಾಗಿತ್ತು. ಇದು ಭಾರತದ ಕೋಪಕ್ಕೆ ಕಾರಣವಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read