ಮೈಸೂರು: ಕಾಂತಾರ ಚಾಪ್ಟರ್-1 ಯಶಸ್ವಿ ಬೆನ್ನಲ್ಲೇ ನಟ, ನಿರ್ದೇಶಕ ರಿಷಬ್ ಶೆಟ್ಟಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡ ಅದಿದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಶ ಪೂಜೆ ಸಲ್ಲಿಸಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ, ಕಾಂತಾರಾ ಸಿನಿಮಾ ಯಶಸ್ವಿ ಪ್ರದರ್ಶ ಕಾಣುತ್ತಿದೆ. ನಾಡಿನ ಹಾಗೂ ದೇಶದ ಜನರು ಅದ್ಭುತವಾದ ಯಶಸ್ಸು ನೀಡಿದ್ದಾರೆ. ತುಂಬಾ ಖುಷಿಯಿದೆ ಎಂದರು.
ಈ ಹಿಂದೆಯೂ ಹೇಳಿದ್ದೆ ಈ ಸಿನಿಮಾದ ಯಶಸ್ಸು ಕನ್ನಡಿಗರಿಗೆ ಸಲ್ಲಬೇಕು ಎಂದು. ಅದೇ ರೀತಿ ಈ ಬಾರಿ ಇನ್ನೊಂದು ಚಾಪ್ಟರ್ ಜನರಿಗೆ ತಲುಪಿಸಲಾಗಿದೆ. ಈ ಬಾರಿಯೂ ಜನರು ಒಪ್ಪಿಕೊಂಡ ರೀತಿ ಸಂತೋಷವಾಗಿದೆ ಎಂದರು.
ಚಾಮುಂಡಿ ಬೆಟ್ಟದ ಬಳಿಕ ರಿಷಬ್ ಶೆಟ್ಟಿ ನಂಜನಗೂಡಿಗೆ ತೆರಳಿ ಶ್ರೀಕಂಠೇಶ್ವರನ ದರ್ಶನ ಪಡೆದು ವಿಶೇಶ ಪೂಜೆ ಸಲ್ಲಿಸಲಿದ್ದಾರೆ.