ಬೆಳಿಗ್ಗೆ 9 ಆದ್ರೂ ಉಪಹಾರ ಸೇವಿಸಲ್ವಾ…..? ಇಂದೇ ನಿಯಮ ಬದಲಿಸಿ

ಬೆಳಿಗ್ಗೆ ಕಚೇರಿಗೆ, ಶಾಲೆಗೆ ಹೋಗುವ ಗಡಿಬಿಡಿ ಒಂದು ಕಡೆಯಾದ್ರೆ ಅವರನ್ನು ಸಿದ್ಧಪಡಿಸುವ ಜವಾಬ್ದಾರಿ ಇನ್ನೊಂದು ಕಡೆ. ಎಲ್ಲ ಕೆಲಸ ಮುಗಿಸಿ ಉಪಹಾರ ಸೇವನೆ ಮಾಡುವ ಮಹಿಳೆಯರ ಸಂಖ್ಯೆ ನಮ್ಮಲ್ಲಿ ಹೆಚ್ಚಿದೆ. ಇನ್ನು ಮಕ್ಕಳು ಒಂದು ಲೋಟ ಹಾಲು ಕುಡಿದು ಶಾಲೆಗೆ ಹೋದ್ರೆ ಕಚೇರಿಗೆ ಹೋಗುವವರು ಕಚೇರಿಗೆ ಹೋದ್ಮೇಲೆ ಉಪಹಾರ ಸೇವನೆ ಮಾಡುವ ಪ್ಲಾನ್‌ ನಲ್ಲಿರುತ್ತಾರೆ. ಒಟ್ಟಿನಲ್ಲಿ ಒಂದಲ್ಲ ಒಂದು ಕಾರಣಕ್ಕೆ ಉಪಹಾರ ಸೇವನೆ ಟೈಂ ಈಗ ಬದಲಾಗಿದೆ. ಬೆಳಿಗ್ಗೆ ಏಳು ಗಂಟೆಯಿಂದ ಎಂಟು ಗಂಟೆಯಲ್ಲಿ ಉಪಹಾರ ಸೇವನೆ ಮಾಡುವವರು ಬಹಳ ಕಡಿಮೆ. ಬಹುತೇಕರು ಒಂಭತ್ತು, ಹತ್ತು ಗಂಟೆ ಮೇಲೆ ಉಪಹಾರ ತಿನ್ನುತ್ತಾರೆ. ನೀವೂ ಅವರಲ್ಲಿ ಒಬ್ಬರಾಗಿದ್ದರೆ ಅದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ.

ನೀವು ಬೆಳಿಗ್ಗೆ ಎಂಟು ಗಂಟೆಯಿಂದ ಒಂಭತ್ತು ಗಂಟೆ ಮಧ್ಯೆ ಉಪಹಾರ ಸೇವನೆ ಮಾಡ್ತಿದ್ದರೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅದೇ ನೀವು ಒಂಭತ್ತು ಗಂಟೆ ನಂತ್ರ ಉಪಹಾರ ತೆಗೆದುಕೊಳ್ಳುವವರಿದ್ದರೆ ಇಂದೇ ಈ ಅಭ್ಯಾಸ ಬಿಡಿ.

ಒಂಭತ್ತು ಗಂಟೆ ನಂತ್ರ ಆಹಾರ ಸೇವನೆ ಮಾಡುವವರಲ್ಲಿ ಹೃದಯಾಘಾತ, ಮಧುಮೇಹ, ರಕ್ತದೊತ್ತಡ ಮತ್ತು ರಕ್ತಹೀನತೆಯಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಅದೇ ನೀವು ಬೆಳಿಗ್ಗೆ ಬೇಗ ಆಹಾರ ಸೇವನೆ ಮಾಡ್ತಿದ್ದರೆ ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣುತ್ತದೆ. ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಸರಿಯಾದ ಸಮಯದಲ್ಲಿ ತಿನ್ನುವುದು ನಿಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ದಿನವಿಡಿ ಚಟುವಟಿಕೆಯಿಂದ ಇರಲು ಹಾಗೂ ರೋಗದಿಂದ ದೂರವಿರಲು ನೀವು ಸರಿಯಾದ ಸಮಯಕ್ಕೆ ಉಪಹಾರ ಸೇವನೆ ಮಾಡುವುದು ಮುಖ್ಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read