ಬರೋಬ್ಬರಿ 3,130 ಕೋಟಿ ರೂ. ಸಂಪತ್ತಿನ ಒಡೆಯ ಬಾಲಿವುಡ್‌ನ ಈ ಸ್ಟಾರ್ ಕಿಡ್ !

ಬಾಲಿವುಡ್‌ನಲ್ಲಿ ತಮ್ಮ ಪೋಷಕರ ಹೆಜ್ಜೆಗಳನ್ನು ಅನುಸರಿಸಿದ ಅನೇಕ ಸ್ಟಾರ್ ಕಿಡ್‌ಗಳಿದ್ದಾರೆ. ಅವರಲ್ಲಿ ಹಲವರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಎತ್ತರಗಳನ್ನು ತಲುಪಿದರೆ, ಕೆಲವರು ತಮ್ಮ ಪೋಷಕರಂತೆ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಒಬ್ಬ ಸ್ಟಾರ್ ಕಿಡ್ ಇದ್ದಾರೆ, ಅವರ ತಂದೆ ಉದ್ಯಮದ ಖ್ಯಾತ ನಿರ್ದೇಶಕರು. ಇವರು ತಮ್ಮ ವೃತ್ತಿಜೀವನದಲ್ಲಿ ಏರಿಳಿತಗಳನ್ನು ಕಂಡರೂ, ಎಲ್ಲವನ್ನೂ ಮೀರಿ ಇಂದು ಅತಿ ಶ್ರೀಮಂತ ಸ್ಟಾರ್ ಕಿಡ್ ಎಂದು ಗುರುತಿಸಿಕೊಂಡಿದ್ದಾರೆ.

ಈ ನಟ ಅನೇಕ ವಿಷಯಗಳಿಗೆ ಹೆಸರುವಾಸಿಯಾಗಿದ್ದಾರೆ, ಅದರಲ್ಲಿ ನೃತ್ಯವೂ ಒಂದು. 2000ನೇ ಇಸವಿಯಲ್ಲಿ ಚೊಚ್ಚಲ ಪ್ರವೇಶ ಮಾಡಿದ ಇವರ ಮೊದಲ ಚಿತ್ರವೇ ಬ್ಲಾಕ್‌ಬಸ್ಟರ್ ಆಗಿ ದೊಡ್ಡ ಯಶಸ್ಸು ತಂದುಕೊಟ್ಟಿತು. ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನೀವು ಆಶ್ಚರ್ಯಪಡುತ್ತಿದ್ದರೆ, ಅವರು ಬೇರೆ ಯಾರೂ ಅಲ್ಲ, ಗ್ರೀಕ್ ಗಾಡ್ ಎಂದೇ ಖ್ಯಾತಿ ಪಡೆದಿರುವ ಹೃತಿಕ್ ರೋಷನ್.

ಬಾಲಿವುಡ್‌ನ ಅತಿ ಶ್ರೀಮಂತ ಸ್ಟಾರ್ ಕಿಡ್

ಹೃತಿಕ್ ರೋಷನ್ ಅವರನ್ನು ಭಾರತೀಯ ಚಿತ್ರರಂಗದ ಅತಿ ಶ್ರೀಮಂತ ಸ್ಟಾರ್ ಕಿಡ್ ಎಂದು ಕರೆಯಲಾಗುತ್ತದೆ. ಜಿಕ್ಯೂ ಇಂಡಿಯಾ (GQ India) ವರದಿಯ ಪ್ರಕಾರ, ಅವರ ಒಟ್ಟು ನಿವ್ವಳ ಮೌಲ್ಯ (Net worth) 3,130 ಕೋಟಿ ರೂ. ಇದರರ್ಥ ಆಲಿಯಾ ಭಟ್, ರಣಬೀರ್ ಕಪೂರ್ ಮತ್ತು ಜಾಹ್ನವಿ ಕಪೂರ್ ಅವರಂತಹ ಸ್ಟಾರ್ ಕಿಡ್‌ಗಳಿಗಿಂತ ಸಂಪಾದನೆಯಲ್ಲಿ ಅವರು ಬಹಳ ಮುಂದಿದ್ದಾರೆ.

ಹೃತಿಕ್ ಅವರ ಚೊಚ್ಚಲ ಚಿತ್ರವು ಬ್ಲಾಕ್‌ಬಸ್ಟರ್ ಆಗಿ, ಅವರಿಗೆ ರಾತ್ರೋರಾತ್ರಿ ಖ್ಯಾತಿ ತಂದುಕೊಟ್ಟಿತು. ತಮ್ಮ ಇಪ್ಪತ್ತು ವರ್ಷಗಳ ವೃತ್ತಿಜೀವನದಲ್ಲಿ, ಈ ಸೂಪರ್‌ಸ್ಟಾರ್ ‘ಕ್ರಿಶ್’, ‘ಧೂಮ್ 2’, ‘ಜೋಧಾ ಅಕ್ಬರ್’, ‘ಜಿಂಗದಿ ನಾ ಮಿಲೇಗಿ ದೊಬಾರಾ’ ಮತ್ತು ‘ವಾರ್’ ನಂತಹ ಅನೇಕ ಉತ್ತಮ ಚಿತ್ರಗಳನ್ನು ನೀಡಿದ್ದಾರೆ.

ಹೃತಿಕ್ ರೋಷನ್ ಅವರ ಆದಾಯದ ಮೂಲ ಯಾವುದು ?

ಹೃತಿಕ್ ಕೇವಲ ಚಲನಚಿತ್ರಗಳಿಂದ ಮಾತ್ರವಲ್ಲದೆ, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು, ಅವರ ಕುಟುಂಬದ ನಿರ್ಮಾಣ ಸಂಸ್ಥೆ ಫಿಲ್ಮ್‌ಕ್ರಾಫ್ಟ್ (Filmkraft) ಮತ್ತು ಅವರ ಫಿಟ್‌ನೆಸ್ ಹಾಗೂ ಲೈಫ್‌ಸ್ಟೈಲ್ ಬ್ರ್ಯಾಂಡ್ ಎಚ್‌ಆರ್‌ಎಕ್ಸ್ (HRX) ನಿಂದಲೂ ಸಾಕಷ್ಟು ಹಣ ಸಂಪಾದಿಸುತ್ತಾರೆ. ಫೈನಾನ್ಷಿಯಲ್ ಎಕ್ಸ್‌ಪ್ರೆಸ್ (Financial Express) ವರದಿಯ ಪ್ರಕಾರ, ಎಚ್‌ಆರ್‌ಎಕ್ಸ್‌ನ ಮೌಲ್ಯವೊಂದೇ ಅಂದಾಜು 7,300 ಕೋಟಿ ರೂ. ಆಗಿದೆ. ಹೀಗೆ ಹಲವು ಮೂಲಗಳಿಂದ ಆದಾಯ ಗಳಿಸುವ ಹೃತಿಕ್ ರೋಷನ್ ನಿಜಕ್ಕೂ ಕಿಂಗ್ ಸೈಜ್ ಜೀವನ ನಡೆಸುತ್ತಿದ್ದಾರೆ.


Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read