ಮದುವೆ ಮನೆಗೆ ನುಗ್ಗಿದ ʼಘೇಂಡಾಮೃಗʼ ; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ | Watch

ನೇಪಾಳದ ಚಿತ್ವಾನ್ ಜಿಲ್ಲೆಯಲ್ಲಿ ನಡೆದ ಮದುವೆ ಆರತಕ್ಷತೆ ಸಮಾರಂಭವೊಂದರಲ್ಲಿ ಅನಿರೀಕ್ಷಿತ ಅತಿಥಿಯೊಬ್ಬರು ಪ್ರತ್ಯಕ್ಷರಾಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಘಟನೆಯ ವೈರಲ್ ವಿಡಿಯೋದಲ್ಲಿ ಬೃಹತ್ ಗಾತ್ರದ ಘೇಂಡಾಮೃಗವೊಂದು ಯಾವುದೇ ಹಿಂಜರಿಕೆಯಿಲ್ಲದೆ ಮದುವೆ ಪಾರ್ಟಿಯೊಳಗೆ ಪ್ರಶಾಂತವಾಗಿ ಸಾಗುವುದನ್ನು ಕಾಣಬಹುದು.

ಈ ಘೇಂಡಾಮೃಗವು ಹತ್ತಿರದ ಚಿತ್ವಾನ್ ರಾಷ್ಟ್ರೀಯ ಉದ್ಯಾನವನದಿಂದ ದಾರಿ ತಪ್ಪಿ ಬಂದಿದೆ ಎಂದು ನಂಬಲಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಆದ ಈ ಕ್ಲಿಪ್ ತಕ್ಷಣವೇ ವೈರಲ್ ಆಗಿದ್ದು, ನೆಟ್ಟಿಗರು ನಗು ಮತ್ತು ಆಶ್ಚರ್ಯದ ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

“ಇದು ನಿಜಕ್ಕೂ ‘ವೈಲ್ಡ್‌’ ಕಾರ್ಡ್ ಎಂಟ್ರಿ” ಎಂದು ಹಲವರು ಕರೆದರೆ, “ಘೇಂಡಾಮೃಗವು ವಿಷ್ಣುವಿನ ವಾಹನ, ಈ ಮದುವೆಗೆ ಆಶೀರ್ವಾದ ದೊರೆತಿದೆ” ಎಂದು ಕೆಲವರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು, “ಅದು ಆಹ್ವಾನಿತ ಅತಿಥಿ, ನಾನು ಆಹ್ವಾನ ಪತ್ರಿಕೆ ನೀಡಲು ಹೋಗಿದ್ದೆ” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅದೃಷ್ಟವಶಾತ್, ಈ ಅನಿರೀಕ್ಷಿತ ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

ವಿಡಿಯೋದ ದಿನಾಂಕ ಮತ್ತು ಸಿಂಧುತ್ವವನ್ನು ಇನ್ನೂ ಪರಿಶೀಲಿಸಲಾಗಿಲ್ಲವಾದರೂ, ಇದು ಈಗಾಗಲೇ ಆನ್‌ಲೈನ್‌ನಲ್ಲಿ ಗಮನಾರ್ಹ ಆಕರ್ಷಣೆ ಗಳಿಸಿದೆ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read