ಹಳೇ ಅಯೋಧ್ಯೆ ಕೇಸ್ ಗೆ ಮರುಜೀವ : 30 ವರ್ಷದ ಬಳಿಕ ಹುಬ್ಬಳ್ಳಿಯಲ್ಲಿ ಇಬ್ಬರು ಹೋರಾಟಗಾರರು ಅರೆಸ್ಟ್

ಬೆಂಗಳೂರು : ಅಯೋಧ್ಯೆ ಹೋರಾಟ ಕೇಸ್ ಗೆ ಮರುಜೀವ ಬಂದಿದ್ದು, 30 ವರ್ಷದ ಬಳಿಕ ಹುಬ್ಬಳ್ಳಿಯಲ್ಲಿ ಇಬ್ಬರು ಹೋರಾಟಗಾರರನ್ನು ಬಂಧಿಸಲಾಗಿದೆ.

ಹುಬ್ಬಳ್ಳಿಯಲ್ಲಿ 1992ರ ಡಿ.5ರಂದು ಶ್ರೀರಾಮಮಂದಿರಕ್ಕಾಗಿ ನಡೆದಿದ್ದ ಹೋರಾಟದಲ್ಲಿ ಪಾಲ್ಗೊಂಡಿದ್ದವರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. 15 ದಿನಗಳ ಹಿಂದೆ, ಡಿ.19ರಂದು ರಾಜು ಧರ್ಮ ದಾಸ ಎಂಬುವರನ್ನು ಹಾಗೂ 2 ದಿನದ ಹಿಂದೆ ಶ್ರೀಕಾಂತ ಪೂಜಾರಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಅಯೋಧ್ಯೆ ಹೋರಾಟಗಾರರ ಬಂಧನ ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ರಾತ್ರಿ ಹುಬ್ಬಳ್ಳಿ ಶಹರ ಠಾಣೆಗೆ ಮುತ್ತಿಗೆ ಹಾಕಿ ಹೋರಾಟಗಾರರ ಬಿಡುಗಡೆಗೆ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜ.22ರಂದು ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಇಡೀ ದೇಶಾದ್ಯಂತ ರಾಮನ ಜಪ ಆರಂಭವಾಗಿದೆ. ಇದರ ನಡುವೆ 30 ವರ್ಷದ ಬಳಿಕ ಅಯೋಧ್ಯೆ ಕೇಸ್ ಗೆ ಮರು ಜೀವ ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read