ಸರ್ಕಾರಿ ನೌಕರರ ‘ಆರೋಗ್ಯ ಸಂಜೀವಿನಿ ಯೋಜನೆ’ ಪರಿಷ್ಕರಣೆ: ಒಳ ರೋಗಿಗಳಿಗೆ ಮಾತ್ರ ಸೌಲಭ್ಯ

ಬೆಂಗಳೂರು: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರದಿಂದ ಪರಿಷ್ಕೃತ ಸೂಚನೆ ನೀಡಲಾಗಿದೆ.

ಚಿಕಿತ್ಸೆಗೆ ತಗಲುವ ವೆಚ್ಚವನ್ನು CGHS ದರದಡಿ ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕ ಸರ್ಕಾರ(ವೈದ್ಯಕೀಯ ಹಾಜರಾತಿ) ನಿಯಮ-1963 ರಡಿ ಮರುಪಾವತಿ ಪಡೆಯಲು ಮತ್ತು KASS ಯೋಜನೆಯನ್ನು ಆಯ್ಕೆ ಮಾಡಿಕೊಳ್ಳದ ಸರ್ಕಾರಿ ನೌಕರರು ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕ ಸರ್ಕಾರಿ ನೌಕರರ(ವೈದ್ಯಕೀಯ ಹಾಜರಾತಿ) ನಿಯಮಗಳು-1963 ರಡಿ ಭೌತಿಕ ಬಿಲ್‌ಗಳನ್ನು ಸಲ್ಲಿಸುವ ಮೂಲಕ ಪ್ರಸ್ತುತ ಕಾರ್ಯವಿಧಾನದಂತೆ CGHS ದರಗಳ ಪ್ರಕಾರ ವೈದ್ಯಕೀಯ ವೆಚ್ಚಗಳ ಮರುಪಾವತಿ ಪಡೆಯಲು ಅರ್ಹರಿರುತ್ತಾರೆ.

ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮೇಲೆ ಕ್ರಮ ಸಂಖ್ಯೆ:1 ರಿಂದ 3 ರಲ್ಲಿ ಓದಲಾದ ಸರ್ಕಾರದ ಆದೇಶಗಳಲ್ಲಿ ನೀಡಲಾದ ಕಾರ್ಯನೀತಿ ಸೂಚನೆಗಳನ್ನು ಭಾಗಶ: ಮಾರ್ಪಡಿಸಿ ಪರಿಷ್ಕೃತ ಕಾರ್ಯನೀತಿ ಸೂಚನೆಗಳನ್ನು ನೀಡುವುದು ಅಗತ್ಯವೆಂದು ಸರ್ಕಾರವು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು ಮಹತ್ವಾಕಾಂಕ್ಷಿ ಆರೋಗ್ಯ ಸೇವಾ ಯೋಜನೆಯಾಗಿದ್ದು, ಈ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಜಾರಿಯಾದಾಗ ಎಲ್ಲಾ ಹೊರರೋಗಿ ವೈದ್ಯಕೀಯ ಚಿಕಿತ್ಸೆಗಳು, ಔಷಧೋಪಚಾರಗಳು, ವೈದ್ಯಕೀಯ ತಪಾಸಣೆಗಳು, ಒಳರೋಗಿ ಚಿಕಿತ್ಸೆಗಳು, ವಾರ್ಷಿಕ ಆರೋಗ್ಯ ತಪಾಸಣೆ ಮುಂತಾದ ಆರೋಗ್ಯ ಸೇವಾ ಸೌಲಭ್ಯಗಳನ್ನು ಒದಗಿಸಲಾಗುವುದು.

ಯೋಜನೆಯ ಮೊದಲನೇ ಹಂತದಲ್ಲಿ KASS ಯೋಜನೆಯಡಿ ಒಳಗೊಂಡ ಒಳರೋಗಿ ಚಿಕಿತ್ಸಾ (In-patient Treatment) ವಿಧಾನಗಳನ್ನು ಮಾತ್ರ ಪ್ರಾರಂಭಿಸಲಾಗುವುದು. ಹೊರರೋಗಿ ಚಿಕಿತ್ಸಾ ವಿಧಾನಗಳು (OPT) ಆಯುಷ್ ಚಿಕಿತ್ಸಾ ವಿಧಾನಗಳನ್ನು ಯೋಜನೆಯ ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು. KASS ಚಿಕಿತ್ಸಾ ವಿಧಾನಗಳಲ್ಲಿ ಒಳಗೊಂಡ ಡೇ ಕೇರ್ (Day – Care) ಚಿಕಿತ್ಸಾ ವಿಧಾನಗಳನ್ನು ಹೊರತು ಪಡಿಸಿ ಉಳಿದ ಡೇ ಕೇರ್ ಚಿಕಿತ್ಸೆಗಳನ್ನು ಕೂಡ ಯೋಜನೆಯ ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು.

KASS PACKAGE MASTER: ໖ & Authority (NHA) ಪ್ರಕಟಿಸಿರುವ HBP 2022 ಚಿಕಿತ್ಸಾ ವಿಧಾನಗಳು ಹಾಗೂ ದರಗಳನ್ನು ಮ್ಯಾನೇಜ್ ಮೆಂಟ್) ಒಳಗೊಂಡಿರುತ್ತವೆ: 3 CGHS, AB-ArK, National Health ರಡಿ ಒಳಗೊಂಡ ಸಮ್ಮಿಶ್ರ ವೈದ್ಯಕೀಯ (ಶಸ್ತ್ರ ಚಿಕಿತ್ಸೆಗಳು ಹಾಗೂ ಮೆಡಿಕಲ್) ಈ KASS ಮಾಸ್ಟರ್ ಪ್ಯಾಕೇಜ್ ದರಗಳನ್ನು SAST ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲು ಕ್ರಮವಹಿಸತಕ್ಕದ್ದು.

CGHS ಪ್ಯಾಕೇಜ್ ಮುಂದುವರೆಸುವುದು ಅಡಿಯಲ್ಲಿ ನಿಗದಿಪಡಿಸಲಾದ ಹಾಗೂ CGHS ಅಡಿಯಲ್ಲಿ ಇಂಪ್ಲಾಂಟ್‌ಗಳನ್ನು ನಿಗದಿಪಡಿಸದಿರುವ ಇಂಪ್ಲಾಂಟ್‌ಗಳನ್ನು HBP 2022 ರಲ್ಲಿ ನಿಗದಿಪಡಿಸಿರುವ ಇಂಪ್ಲಾಂಟ್ ಹಾಗೂ ದರಗಳನ್ನು ಅಳವಡಿಸಲು ಹಾಗೂ ಈ ರೀತಿಯ ಕ್ರಮವನ್ನು SAST ಅಡಿಯಲ್ಲಿ ತಾಂತ್ರಿಕ ಸಮಿತಿಯ ಅನುಮೋದನೆ ಪಡೆದು ಕ್ರಮ ಕೈಗೊಳ್ಳತಕ್ಕದ್ದು.

CGHS ಅಡಿಯಲ್ಲಿ ಚಿಕಿತ್ಸೆಗಳನ್ನು ನೀಡಿದಲ್ಲಿ CGHS ದರಗಳನ್ವಯ Semi Private ಕೊಠಡಿಗಳಿಗೆ ಅನ್ವಯವಾಗಲಿದ್ದು, ಈ ದರಗಳನ್ನು ಖಾಸಗಿ ವರ್ಗದ ಕೊಠಡಿಗೆ ಶೇ. 15% ಹೆಚ್ಚಿಸಲು ಮತ್ತು ಸಾಮಾನ್ಯ ವಾರ್ಡ್‌ಗೆ 10% ರಷ್ಟು ಕಡಿತಗೊಳಿಸಿ KASS ಪ್ಯಾಕೇಜ್‌ಗಳಿಗೆ ದರಗಳನ್ನು ಅಳವಡಿಸಿಕೊಳ್ಳತಕ್ಕದ್ದು.

 HBP 2022 ಪ್ಯಾಕೇಜ್ ಅಡಿಯಲ್ಲಿ ದರಗಳನ್ನು ಸಾಮಾನ್ಯ ವಾರ್ಡ್‌ಳಿಗೆ ಅನುಗುಣವಾಗಿ ನಿಗದಿಪಡಿಸಲಾಗಿದ್ದು, ಇದಲ್ಲದೇ ಬೆಂಗಳೂರನ್ನು ಟೈರ್- 1 (Tier-1) ಸಿಟಿ, ಬೆಳಗಾವಿ, ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರು ನಗರಗಳನ್ನು ಟೈರ್‌-2 ಸಿಟಿಗಳು ಮತ್ತು ರಾಜ್ಯದ ಉಳಿದ ಪ್ರದೇಶಗಳನ್ನು ಟೈರ್-3 ಸಿಟಿಗಳ ಅಡಿಯಲ್ಲಿ ದರಗಳನ್ನು ನಿಗದಿಪಡಿಸಲಾಗಿದೆ. ಆದರೆ HBP ಪ್ಯಾಕೇಜ್ ರಡಿ ಚಿಕಿತ್ಸೆ ಪಡೆಯುವ ರಾಜ್ಯದ ಎಲ್ಲಾ ಪ್ರದೇಶಗಳ ಸರ್ಕಾರಿ ನೌಕರರಿಗೆ ಟೈರ್-3 ಪ್ಯಾಕೇಜ್ ದರಗಳನ್ನು ಏಕರೂಪವಾಗಿ ಅಳವಡಿಸಿಕೊಳ್ಳಲು ಹಾಗೂ CHGS ಮಾದರಿಯಲ್ಲಿ HBP-2022 ಪ್ಯಾಕೇಜ್‌ರಡಿ ಸಹ ಅರೆ-ಖಾಸಗಿ ವರ್ಗದ ಕೊಠಡಿಗಳಿಗೆ 10% ಮತ್ತು ಖಾಸಗಿ ವರ್ಗದ ಕೊಠಡಿಗಳಿಗೆ 25% ಹೆಚ್ಚಿಸುವುದು.

SAST ಅಡಿಯಲ್ಲಿ ಹಾಗೂ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು-1963 ರಡಿ ಈಗಾಗಲೇ ನೋಂದಾಯಿಸಲಾದ ಆಸ್ಪತ್ರೆಗಳನ್ನು KASS ಯೋಜನೆಯ ಒಪ್ಪಂದವನ್ನು ಅನ್ವಯಿಸಿ ಮುಂದುವರೆಸತಕ್ಕದ್ದು.

CGHS ಪ್ಯಾಕೇಜ್‌ಗಳಡಿ NABH ಮಾನ್ಯತೆಯನ್ನು ಪಡೆದಿರುವ ನೋಂದಾಯಿತ ಆಸ್ಪತ್ರೆಗಳಿಗೆ ಈಗಾಗಲೇ ಪ್ರೋತ್ಸಾಹಕವಾಗಿ ಪ್ಯಾಕೇಜ್ ದರಗಳ ಮೇಲೆ ನೀಡಲಾಗುತ್ತಿರುವ 15% ಹೆಚ್ಚುವರಿ ಪ್ರೋತಾಹ ಧನವನ್ನು KASS ನಲ್ಲಿ ಒಳಗೊಂಡಿರುವ ಎಲ್ಲ ಪ್ಯಾಕೇಜ್ ಗಳಿಗೂ ಸಹ ಅನ್ವಯಿಸತಕ್ಕದ್ದು.

ರಾಜ್ಯ ಸರ್ಕಾರಿ ನೌಕರರು KASS ಪ್ಯಾಕೇಜ್‌ ಗಳಡಿ ಚಿಕಿತ್ಸೆ ಪಡೆಯಲು ಇಚ್ಚಿಸಿದಲ್ಲಿ KASS ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಸರ್ಕಾರಿ ನೌಕರರು ವಂತಿಕೆಯನ್ನು ಪಾವತಿಸಬೇಕಾಗುವುದು. KASS ಯೋಜನೆಯನ್ನು ಆಯ್ಕೆ ಮಾಡಿಕೊಳ್ಳದ ಸರ್ಕಾರಿ ನೌಕರರು KASS ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಲ್ಲಿ ಕರ್ನಾಟಕ ಸರ್ಕಾರ (ವೈದ್ಯಕೀಯ ಹಾಜರಾತಿ) ನಿಯಮ-1963 ರಡಿ ಭೌತಿಕ ಬಿಲ್‌ಗಳನ್ನು ಸಲ್ಲಿಸುವ ಮೂಲಕ ಪ್ರಸ್ತುತ ಕಾರ್ಯವಿಧಾನದಲ್ಲಿ CGHS ದರಗಳ ಪ್ರಕಾರ ವೈದ್ಯಕೀಯ ವೆಚ್ಚಗಳ ಮರುಪಾವತಿ ಸೌಲಭ್ಯವನ್ನು ಪಡೆಯಬಹುದಾಗಿದೆ.

ಹೊರರೋಗಿ ಚಿಕಿತ್ಸೆಗಳ ಸಂಬಂಧದಲ್ಲಿ ಸರ್ಕಾರವು ದೀರ್ಘಕಾಲಿಕ ಖಾಯಿಲೆಗಳು (Chronic Diseases) ಎಂದು ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 48 ಎಸ್ ಆರ್ ಎಫ್ 2018 ದಿನಾಂಕ: 14.03.2018 ಹಾಗೂ ಸರ್ಕಾರವು ಕಾಲಕಾಲಕ್ಕೆ ಗುರುತಿಸಿ ಅಧಿಸೂಚಿಸುವ ಖಾಯಿಲೆಗಳ ಸಂಬಂಧ ಮಾತ್ರ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅರ್ಹ ಸದಸ್ಯರು ಪಡೆದ ಹೊರರೋಗಿ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು (ವೈದ್ಯರ ಸಮಾಲೋಚನಾ ಶುಲ್ಕ, ವೈದ್ಯಕೀಯ ತಪಾಸಣಾ ವೆಚ್ಚ ಹಾಗೂ ಸಂಬಂಧಪಟ್ಟ ಖಾಯಿಲೆಗೆ ಭರಿಸಿದ ಔಷಧಿಗಳ ವೆಚ್ಚ), ಪ್ರಸ್ತುತ ಅನುಸರಿಸಲಾಗುತ್ತಿರುವ ಕಾರ್ಯವಿಧಾನದಂತೆ ಸಂಬಂಧಪಟ್ಟ ಕಚೇರಿಯ ನಿಯಂತ್ರಣಾಧಿಕಾರಿಗಳು (Controlling Officers) ಸರ್ಕಾರಿ ನೌಕರರಿಗೆ ಹಿಂಬರಿಸತಕ್ಕದ್ದು. ಹೊರರೋಗಿ ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಐಟಂವಾರು ದರಗಳನ್ನು ಪ್ರಸ್ತುತ ಅನುಸರಿಸಲಾಗುತ್ತಿರುವಂತೆ CGHS ವೈದ್ಯರ ಸಮಾಲೋಚನಾ ದರಗಳು ಹಾಗೂ ವೈದ್ಯಕೀಯ ತಪಾಸಣೆಗಳ ದರಗಳನ್ನು ಅಳವಡಿಸಿಕೊಂಡು ನಿರ್ಧರಿಸತಕ್ಕದ್ದು.

ಕಾರ್ಯವಿಧಾನಗಳನ್ನು ನಿಗದಿಪಡಿಸದಿರುವ (Unspecified Procedure) ಚಿಕಿತ್ಸಾ ವಿಧಾನಗಳಿಗೆ AB-ArK ರಡಿ ನಿಗದಿಪಡಿಸಿರುವ ಮಾನದಂಡಗಳನ್ವಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇವರಿಗೆ ಚಿಕಿತ್ಸಾ ದರ ನಿಗದಿಪಡಿಸುವ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read