ಇಂದು ನಾಲ್ಕನೇ ಶನಿವಾರವೂ ಕಂದಾಯ ಕಚೇರಿ ಕಾರ್ಯನಿರ್ವಹಣೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ ಮಾಲೀಕರ ಅನುಕೂಲಕ್ಕಾಗಿ ಒನ್ ಟೈಮ್ ಸೆಟ್ಲ್ ಮೆಂಟ್ ಜಾರಿಗೊಳಿಸಿದ್ದು, ಜುಲೈ 31ಕ್ಕೆ ಕೊನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಜುಲೈ 27ರಂದು ಶನಿವಾರ ಬಿಬಿಎಂಪಿಯ ಎಲ್ಲಾ ಕಂದಾಯ ಕಚೇರಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.

ಜುಲೈ 27ರ 4ನೇ ಶನಿವಾರ ಸಾರ್ವಜನಿಕ ರಜಾ ದಿನವಾಗಿದ್ದು, ಇಂದು ಕೂಡ ಕಂದಾಯ ಕಚೇರಿ ಸೇವೆ ಲಭ್ಯವಿರುತ್ತದೆ. ವಲಯ ಜಂಟಿ ಆಯುಕ್ತರ ಕಚೇರಿಗಳು ಹಾಗೂ ಎಲ್ಲಾ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿ ಹೆಲ್ತ್ ಡೆಸ್ಕ್ ಗಳು ಕಾರ್ಯ ನಿರ್ವಹಿಸಲು ತಿಳಿಸಲಾಗಿದೆ. ಸಂಬಂಧಿಸಿದ ಕಂದಾಯ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಕಚೇರಿಯಲ್ಲಿ ಹಾಜರಿದ್ದು, ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ. ಆಸ್ತಿ ತೆರಿಗೆದಾರರು ಹಾಗೂ ಶೈಕ್ಷಣಿಕ ಸಂಸ್ಥೆಗಳು ಒನ್ ಟೈಮ್ ಸೆಟ್ಲ್ ಮೆಂಟ್ ಸದುಪಯೋಗಪಡಿಸಿಕೊಳ್ಳುವಂತೆ ಕಂದಾಯ ವಿಭಾಗದ ಜಂಟಿ ಆಯುಕ್ತರಾದ ಲಕ್ಷ್ಮಿದೇವಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read