ಶಿಕ್ಷಕರ ಮೇಲೆ ಸೇಡು ತೀರಿಸಿಕೊಳ್ಳಲು ಶಾಲೆ ಖರೀದಿಸಿದ ನಟ ಮಾಡಿದ್ದೇನು ಅಂತ ತಿಳಿದ್ರೆ ಶಾಕ್ ಆಗ್ತೀರಿ….!

ಪ್ರತಿಯೊಬ್ಬರ ಶಿಕ್ಷಣ ಪ್ರಾರಂಭವಾಗುವ ಮೊದಲ ಸ್ಥಳವೆಂದರೆ ಶಾಲೆ. ಸಾಮಾನ್ಯ ವ್ಯಕ್ತಿಯಾಗಿರಲಿ ಅಥವಾ ಶ್ರೀಮಂತ ಕುಟುಂಬದ ಸದಸ್ಯರೇ ಆಗಿರಲಿ ಶಾಲಾ ಶಿಕ್ಷಣ ಬದುಕಿನ ಮೊದಲ ಹಂತ. ಪ್ರತಿಯೊಬ್ಬರೂ ಶಾಲೆಯೊಂದಿಗೆ ಕೆಲವು ನೆನಪುಗಳನ್ನು ಹೊಂದಿರುತ್ತಾರೆ.

ತಾನು ಓದಿದ ಶಾಲೆಗೆ ಉತ್ತಮವಾಗಿರುವುದನ್ನೇನಾದರೂ ಮಾಡಬೇಕು ಎಂದು ಬಯಸುತ್ತಾರೆ. ಆದರೆ ಓರ್ವ ನಟ ತಾನು ಓದಿದ ಶಾಲೆಗೆ ಏನು ಮಾಡಿದ್ದಾನೆಂದು ತಿಳಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ.

ಟರ್ಕಿಯ ನಟನೊಬ್ಬ ತಾನು ಓದಿದ ಶಾಲೆಯ ಮೇಲೆ ಸೇಡು ತೀರಿಸಿಕೊಳ್ಳುವ ನಿರ್ಧಾರದಿಂದ ಸಂಚಲನ ಮೂಡಿಸಿದ್ದಾನೆ. ಆತ ಶಾಲೆಯನ್ನು ಖರೀದಿಸಿ ಬಳಿಕ ಅದನ್ನು ಕೆಡವಿ ಹಾಕಿದ್ದಾನೆ. ಶಾಲೆಯ ಮೇಲೆ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದ್ದಾಗಿ ಹೇಳಿದ್ದಾನೆ ಎಂಬುದು ಅಚ್ಚರಿ ಸಂಗತಿ.

ನಟ ಕಾಗ್ಲರ್ ಎರ್ಟುಗ್ರುಲ್ ತಾನು ಓದಿದ ಪ್ರಾಥಮಿಕ ಶಾಲೆಯನ್ನು ಖರೀದಿಸಿ ಕೆಡವಿದ್ದಾನೆ. ಶಾಲೆ ಕೆಡವಿ ಹಾಕಿದ ಬಳಿಕ ಅವಶೇಷದ ಮುಂದೆ ಪೋಸ್ ಕೊಟ್ಟಿದ್ದಾನೆ. ಶಾಲೆಯಲ್ಲಿ ಓದುತ್ತಿದ್ದಾಗ ಅವಮಾನಕ್ಕೆ ಒಳಗಾಗಿದ್ದು, ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ನಟ ಪ್ರಾಥಮಿಕ ಶಾಲೆಯಲ್ಲಿದ್ದಾಗ ಶಿಕ್ಷಕರು ಆತನನ್ನು ಹೊಡೆಯುತ್ತಿದ್ದರು. ನಟ ಇದನ್ನು ಮರೆಯದೇ ಸೇಡು ತೀರಿಸಿಕೊಳ್ಳಲು ಮುಂದಾಗಿ ಶಾಲಾ ಕಟ್ಟಡದ ಅವಶೇಷಗಳ ಮೇಲೆ ಪೋಸ್ ನೀಡಿದ್ದಾರೆ.

ನಟನ ಕಾರ್ಯ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಈ ಘಟನೆಯು ವಿದ್ಯಾರ್ಥಿಯು ಚಿಕ್ಕ ವಯಸ್ಸಿನಲ್ಲೇ ಶಿಕ್ಷಣ ಸಂಸ್ಥೆಗಳಲ್ಲಿ ಅನುಭವಿಸುವ ಆಘಾತದ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಕೆಲವರು ಹೇಳಿದ್ದಾರೆ.

ಇಂತಹ ವಿಷಯಗಳನ್ನು ನಾವು ಕೇಳುತ್ತಿರುವುದು ಬಹುಶಃ ಇದೇ ಮೊದಲು. ಅನೇಕ ಸಂದರ್ಭಗಳಲ್ಲಿ, ಸೆಲೆಬ್ರಿಟಿಗಳು ತಮ್ಮ ಶಾಲಾ-ಕಾಲೇಜುಗಳಿಗೆ ದೇಣಿಗೆ ನೀಡುವುದನ್ನು ನಾವು ನೋಡಿದ್ದೇವೆ. ಆದರೆ ಹೊಸ ಘಟನೆ ಇದಕ್ಕಿಂತ ಭಿನ್ನವಾಗಿದೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read