ಬೆಂಗಳೂರು: ಒಕ್ಕಲಿಗರು ಮತ್ತು ಪಂಚಮಸಾಲಿ ಲಿಂಗಾಯಿತರಿಗೆ ಮೀಸಲಾತಿ ನೀಡಲು ರಚಿಸಲಾಗಿದ್ದ ಹೊಸ ಎರಡು ಕೆಟಗರಿಗಳಿಗೆ ಹೈಕೋರ್ಟ್ ಬ್ರೇಕ್ ಹಾಕಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿದೆ.
ಒಕ್ಕಲಿಗರಿಗೆ 2ಸಿ ಹಾಗೂ ಲಿಂಗಾಯಿತರಿಗೆ 2ಡಿ ಮೀಸಲಾತಿ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದು, ಇದಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಪಂಚಮಸಾಲಿ ಲಿಂಗಾಯಿತರಿಗೆ 2ಡಿ ಮತ್ತು ಒಕ್ಕಲಿಗರಿಗೆ 2 ಸಿ ಅಡಿ ಮೀಸಲಾತಿ ನೀಡಲು ರಚಿಸಿದ್ದ ಎರಡು ಕೆಟಗರಿಗಳಿಗೆ ಬ್ರೇಕ್ ಹಾಕಿದ್ದು, ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಹೇಳಿದೆ.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದಂತೆ ಡಿ.ಜಿ. ರಾಘವೇಂದ್ರ ಎಂಬವರು ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದು, ಅರ್ಜಿದಾರರ ಪರವಾಗಿ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡಿಸಿ ಹೊಸ ಮೀಸಲಾತಿಗೆ ತಡೆ ಕೋರಿ ಮನವಿ ಮಾಡಿದ್ದಾರೆ. ಹೈಕೋರ್ಟ್ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿ ಅಲ್ಲಿಯವರೆಗೆ ಮೀಸಲಾತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ.
3ಎ ನಲ್ಲಿದ್ದ ಒಕ್ಕಲಿಗರಿಗೆ ಹೊಸದಾಗಿ 2ಸಿ ಮತ್ತು 3ಬಿ ನಲ್ಲಿದ್ದ ಲಿಂಗಾಯಿತರಿಗೆ ಹೊಸದಾಗಿ 2ಡಿ ಕೆಟಗರಿ ರಚಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಪಂಚಮಸಾಲಿ ಸಮುದಾಯ 2 ಡಿ ಕೆಟಗರಿ ಬೇಡ. ಅದು ಗೊಂದಲದಿಂದ ಕೂಡಿದ್ದು, 2ಎ ಮೀಸಲಾತಿ ನೀಡಬೇಕೆಂದು ಪಟ್ಟು ಹಿಡಿದಿದೆ.