ಮೂತ್ರದ ಮೂಲಕ ಬ್ರೇನ್​ ಟ್ಯೂಮರ್​ ಕಂಡುಹಿಡಿಯುವ ಸಾಧನ ಅಭಿವೃದ್ಧಿ

ಟೊಕಿಯೊ: ಜಪಾನ್‌ನ ಸಂಶೋಧಕರ ತಂಡವು ಮೂತ್ರದ ಮೂಲಕ ಬ್ರೇನ್​ ಟ್ಯೂಮರ್​ ಕಂಡುಹಿಡಿಯುವ ಹೊಸ ಸಾಧನವೊಂದನ್ನು ಅಭಿವೃದ್ಧಿಪಡಿಸಿದೆ.

ಅಸೋಸಿಯೇಟ್ ಪ್ರೊಫೆಸರ್ ಟಕಾವೊ ಯಾಸುಯಿ ಮತ್ತು ಜಪಾನ್ ಮೂಲದ ನಗೋಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಯೋಶಿನೋಬು ಬಾಬಾ ನೇತೃತ್ವದ ಸಂಶೋಧನಾ ಗುಂಪು ಟೋಕಿಯೊ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಿದೆ.

ಮೆದುಳಿನ ಗಡ್ಡೆಯ (ಬ್ರೇನ್​ ಟ್ಯೂಮರ್​) ರೋಗಿಗಳ ಮೂತ್ರದ ಮಾದರಿಗಳಲ್ಲಿ CD31 ಮತ್ತು CD63 ಎಂದು ಕರೆಯಲ್ಪಡುವ ಎರಡು ರೀತಿಯ ಎಕ್ಸ್‌ಟ್ರಾಸೆಲ್ಯುಲರ್ ವೆಸಿಕಲ್ (EV) ಮೆಂಬರೇನ್ ಪ್ರೋಟೀನ್‌ಗಳನ್ನು ಗುರುತಿಸಲು ಅವರ ಈ ಸಾಧನವನ್ನು ಬಳಸಬಹುದಾಗಿದೆ.

ಇದರ ಮೂಲಕ ರೋಗಿಯ ರೋಗಲಕ್ಷಣಗಳನ್ನು ಆರಂಭದಲ್ಲಿಯೇ ಕಂಡುಹಿಡಿದು, ಚಿಕಿತ್ಸೆ ನೀಡಲು ಅನುಕೂಲ ಆಗುತ್ತದೆ ಎಂದು ತಂಡ ಹೇಳಿದೆ.

ವ್ಯಕ್ತಿಯ ಮೂತ್ರದಲ್ಲಿ ಟ್ಯೂಮರ್-ಸಂಬಂಧಿತ ಎಕ್ಸ್‌ಟ್ರಾಸೆಲ್ಯುಲರ್ ವೆಸಿಕಲ್ಸ್ (ಇವಿಗಳು) ಇರುವಿಕೆಯನ್ನು ಗುರುತಿಸಬಹುದಾಗಿದೆ. ಇದರ ಮೂಲಕ ಮೆದುಳಿನ ಗಡ್ಡೆಯನ್ನು ಗುರುತಿಸಬಹುದು ಎನ್ನುವುದು ಅವರ ಅಭಿಪ್ರಾಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read