ಬೆಂಗಳೂರು: ರಾಜ್ಯದ ಎಲ್ಲ ಅರಣ್ಯ ವಲಯಗಳ ವ್ಯಾಪ್ತಿಯಲ್ಲಿ ಕನಿಷ್ಠ 4-5 ಮುಂಚೂಣಿ ಸಿಬ್ಬಂದಿಗೆ ಉರಗ ರಕ್ಷಣೆಯ ತರಬೇತಿ ಕೊಡಿಸುವಂತೆ ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಸಚಿವರು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಬಿ. ಖಂಡ್ರೆ ತಿಳಿಸಿದ್ದಾರೆ.
ಅರಣ್ಯ ಇಲಾಖೆಯಲ್ಲಿ ಉರಗ ರಕ್ಷಕರ ಕೊರತೆ ಇರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ರಾಜ್ಯದ ಎಲ್ಲ ಅರಣ್ಯ ವಲಯಗಳ ವ್ಯಾಪ್ತಿಯಲ್ಲಿ ಕನಿಷ್ಠ 4-5 ಮುಂಚೂಣಿ ಸಿಬ್ಬಂದಿಗೆ ಉರಗ ರಕ್ಷಣೆಯ ತರಬೇತಿ ಕೊಡಿಸುವುದು ಸೂಕ್ತವಾಗಿರುತ್ತದೆ.
ಮಲೆನಾಡು ಮತ್ತು ಕೊಡಗು ವಿಭಾಗಗಳಲ್ಲಿ ಷೆಡ್ಯೂಲ್ -1 ವನ್ಯಜೀವಿ ಕಾಳಿಂಗ ಸರ್ಪಗಳ ಅಕ್ರಮ ಫೋಟೋಶೂಟ್ ನಡೆಯುತ್ತಿದೆ. ವಾಣಿಜ್ಯ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಹಲವು ದೂರುಗಳು ಬಂದಿದ್ದು, ಇನ್ನು ಮುಂದೆ ತೋಟ ಅಥವಾ ಜನ ವಸತಿ ಪ್ರದೇಶಕ್ಕೆ ಕಾಳಿಂಗ ಸರ್ಪಗಳು ಬಂದಾಗ, ನಿಯಮಾನುಸಾರ ಅನುಮತಿ ಪಡೆದು ಅವುಗಳ ರಕ್ಷಣೆ ಮತ್ತು ಸಂರಕ್ಷಣೆಯನ್ನು ಸಹ ಇಲಾಖೆಯ ಉರಗ ರಕ್ಷಣೆ ತರಬೇತಿ ಪಡೆದ ಸಿಬ್ಬಂದಿಯಿಂದಲೇ ಮಾಡಿಸಲು. ಒಂದೊಮ್ಮೆ ನೋಂದಾಯಿತ ಉರಗ ರಕ್ಷಕರಿಂದ ರಕ್ಷಣೆ ಮಾಡಿಸುವ ಸಂದರ್ಭ ಬಂದಲ್ಲಿ ಅರಣ್ಯ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ರಕ್ಷಣಾ ಕಾರ್ಯ ನಡೆಸಲು ಕ್ರಮ ವಹಿಸುವಂತೆ ಸೂಚಿಸಿದ್ದಾರೆ.
