ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದರ್ಶನ್ ಅವರ ಅರ್ಜಿಯ ವಿಚಾರಣೆ ವೇಳೆ ಅಪರಿಚಿತನೊಬ್ಬ ನ್ಯಾಯಾಲಯಕ್ಕೆ ನುಗ್ಗಿದ್ದಾನೆ.
ಬೆಂಗಳೂರಿನ ಸಿಸಿಹೆಚ್ 64ನೇ ಕೋರ್ಟ್ ಗೆ ಪತ್ರ ಹಿಡಿದು ಅಪರಿಚಿತ ನುಗ್ಗಿದ ಘಟನೆ ನಡೆದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ 17 ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಅಪರಿಚಿತ ವ್ಯಕ್ತಿ ಹೇಳಿದ್ದಾನೆ.
ನೀವು ಯಾರು ಎಂದು ಅಪರಿಚಿತ ವ್ಯಕ್ತಿಯನ್ನು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ನಾನು ರವಿ ಬೆಳಗೆರೆ ಕಡೆಯವನು ಎಂದು ಅಪರಿಚಿತ ನ್ಯಾಯಾಧೀಶರ ಮುಂದೆ ಹೇಳಿದ್ದಾನೆ. ಏನೇ ಇದ್ದರೂ ಸರ್ಕಾರದ ಮುಖಾಂತರ ಬರುವಂತೆ ಜಡ್ಜ್ ಸೂಚಿಸಿದ್ದಾರೆ. ನಿಮ್ಮ ಅರ್ಜಿಯನ್ನು ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ.
ಇನ್ನು ದರ್ಶನ್ ಕೇಸ್ ನ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್ ಸೆ. 9ಕ್ಕೆ ಕೋರ್ಟ್ ಆದೇಶ ಕಾಯ್ದಿರಿಸಿದೆ. ದರ್ಶನ್ ಅವರನ್ನು ಬಳ್ಳಾರಿ ಸೆಂಟ್ರಲ್ ಜೈಲ್ ಗೆ ಸ್ಥಳಾಂತರ ಕೋರಿದ ಅರ್ಜಿ ಮತ್ತು ಹೆಚ್ಚುವರಿ ದಿಂಬು, ಬೆಡ್ ಶೀಟ್ ನೀಡುವಂತೆ ದರ್ಶನ್ ಕೋರಿದ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಸೆಪ್ಟೆಂಬರ್ 9ರಂದು ಸಿಸಿಹೆಚ್ 64ನೇ ನ್ಯಾಯಾಲಯ ಆದೇಶ ಪ್ರಕಟಿಸಲಿದೆ.