ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, 6 ಆರೋಪಿಗಳ ನಡುವೆಯೇ ವೈಮನಸ್ಸು ಆರಂಭವಾಗಿದೆ. ದರ್ಶನ್ ಗ್ಯಾಂಗ್ ನ ಇಬ್ಬರು ಆರೋಪಿಗಳು ತಮ್ಮನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಮನವಿ ಮಾಡಿದ್ದಾರೆ.
ಭರವಸೆ ಕೊಟ್ಟವರು ಕೈಬಿಟ್ಟಿದ್ದಾರೆ. ನಮ್ಮ ವಕೀಲರ ಶುಲ್ಕವನ್ನು ನಮ್ಮ ಕುಟುಂಬದವರೇ ನೋಡಿಕೊಳ್ಳುತ್ತಿದ್ದಾರೆ. ನಮ್ಮನ್ನು ಚಿತ್ರದುರ್ಗ ಅಥವಾ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಿ ಎಂದು ಆರೋಪಿಗಳಾದ ಅನುಕುಮಾರ್ ಹಾಗೂ ಜಗದೀಶ್ ಜೈಲಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮನವಿ ಮಾಡಿದ್ದಾರೆ.
ಚಿತ್ರದುರಗ ಮೂಲದ ಅನುಕುಮಾರ್ ಹಾಗೂ ಜಗದೀಶ್, ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಡಿ ಕೊಲೆಗೆ ಸಹಕರಿಸಿದ್ದ ಹಿನ್ನೆಲೆಯಲ್ಲಿ ಬಂಧಿತರಾಗಿ ಜೈಲು ಸೇರಿದ್ದಾರೆ. ಈ ಹಿಂದೆ ಸಹಾಯ ಮಾಡುವುದಾಗಿ ಹೇಳಿದವರು ಈಗ ಯಾರೂ ಸಹಾಯ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.