ಮುಸ್ಲಿಂರ ವಿರುದ್ಧ ದ್ವೇಷಪೂರಿತ ಪೋಸ್ಟ್; ಸಂಕಷ್ಟಕ್ಕೆ ಸಿಲುಕಿದ ‘ವೈದ್ಯ’

ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಉಡುಪಿ ವೈದ್ಯರೊಬ್ಬರ ವಿರುದ್ಧ ದೂರು ದಾಖಲಾಗಿದೆ. ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದ ವೈದ್ಯ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಡುಪಿಯ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಡಾ.ಕೀರ್ತನ್ ಉಪಾಧ್ಯ ಪೋಸ್ಟ್‌ ವಿವಾದಕ್ಕೆ ಒಳಗಾಗಿದೆ.

ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ, ನೀವು ಪ್ರಪಂಚದಿಂದ ಒಂದು ವಿಷ್ಯವನ್ನು ತೆಗೆದುಹಾಕಲು ಸಾಧ್ಯವಾದ್ರೆ ಏನನ್ನು ತೆಗೆಯುತ್ತೀರಿ ಎಂಬುದಕ್ಕೆ ಉತ್ತರವಾಗಿ ಕೀರ್ತನ್‌ ಉಪಾಧ್ಯ, ಮುಸ್ಲಿಂ ಸಮುದಾಯ ಎಂದು ಬರೆದಿದ್ದರು. ಇವರ ಪೋಸ್ಟ್‌ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ವೇಗವಾಗಿ ವೈರಲ್‌ ಆದ ಪೋಸ್ಟ್‌ ಗೆ ಸಾಕಷ್ಟು ಕಮೆಂಟ್‌ ಬಂದಿದೆ. ಕೀರ್ತನ್‌ ಉಪಾಧ್ಯ ತಮ್ಮ ಖಾತೆಯನ್ನು ಹ್ಯಾಕ್‌ ಮಾಡಲಾಗಿದೆ ಎಂದಿದ್ದಾರೆ. ಅಲ್ಲದೆ ಈ ಸಂಬಂಧ ಕ್ಷಮೆ ಯಾಚನೆ ಮಾಡಿದ್ದಾರೆ.

ಈ ಪೋಸ್ಟನ್ನು ಎಕ್ಸ್‌ ಖಾತೆಯಿಂದ ಡಿಲಿಟ್‌ ಮಾಡಲಾಗಿದೆ. ಆದ್ರೂ ದ್ವೇಷಪೂರಿತ ಸಂದೇಶದ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read