ನಾಪತ್ತೆಯಾಗಿದ್ದ ಪರ್ವತಾರೋಹಿ ಮೃತದೇಹ ಬರೋಬ್ಬರಿ 50 ವರ್ಷಗಳ ಬಳಿಕ ಪತ್ತೆ….!

ಸ್ವಿಜರ್ಲ್ಯಾಂಡ್ ನ penine ಆಲ್ಸ್ಪ್ ಪರ್ವತ ಏರಲು ತೆರಳಿ ನಾಪತ್ತೆಯಾಗಿದ್ದ ಬ್ರಿಟಿಷ್ ಪರ್ವತಾರೋಹಿ ಒಬ್ಬರ ಮೃತದೇಹ ಬರೋಬ್ಬರಿ ಐವತ್ತು ವರ್ಷಗಳ ಬಳಿಕ ಪತ್ತೆಯಾಗಿದೆ. ಈತ 1974ರ ಡಿಸೆಂಬರ್ 31 ರಂದು ನಾಪತ್ತೆಯಾಗಿದ್ದ ಎಂದು ಮೂಲಗಳು ಹೇಳಿವೆ.

ಪರ್ವತಾರೋಹಣ ವೇಳೆ 32 ವರ್ಷ ವಯಸ್ಸಿನವರಾಗಿದ್ದ ಈ ವ್ಯಕ್ತಿ ಬಳಿಕ ನಾಪತ್ತೆಯಾಗಿದ್ದರು. ಈತನ ಮೃತ ದೇಹ 2022ರ ಸೆಪ್ಟೆಂಬರ್ 5 ರಂದು ಪತ್ತೆಯಾಗಿದೆ ಎನ್ನಲಾಗಿದೆ. ಪರ್ವತಾರೋಹಿಯ ವಯಸ್ಸು (ಆಗಿನ ಸಂದರ್ಭದಲ್ಲಿ) ಹಾಗೂ ರಾಷ್ಟ್ರೀಯತೆಯನ್ನು ಮಾತ್ರ ಪೊಲೀಸರು ಬಹಿರಂಗಪಡಿಸಿದ್ದಾರೆ.

1925 ರಿಂದ ಈಚೆಗೆ ಈ ಪರ್ವತದಲ್ಲಿ 300ಕ್ಕೂ ಅಧಿಕ ಮಂದಿ ಪರ್ವತಾರೋಹಿಗಳು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಇದೀಗ ಹಿಮಗಲ್ಲು ಕರಗುತ್ತಿರುವ ಕಾರಣ ಮೃತದೇಹಗಳು ಕಾಣಿಸುತ್ತಿವೆ.

ಈ ಹಿಂದೆ ಅಂದರೆ 1942ರಲ್ಲಿ ಪರ್ವತಾರೋಹಣಕ್ಕೆ ತೆರಳಿದ್ದ ಜೋಡಿಯೊಂದು ನಾಪತ್ತೆಯಾಗಿದ್ದು ಬಳಿಕ ಇವರುಗಳ ಮೃತದೇಹ 2017ರಲ್ಲಿ ಪತ್ತೆಯಾಗಿತ್ತು. ಇದೀಗ ಮತ್ತೊಬ್ಬ ಪರ್ವತಾರೋಹಿಯ ದೇಹ 50 ವರ್ಷಗಳ ಬಳಿಕ ಪತ್ತೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read