ಬೆಂಗಳೂರು: ಎರಡನೇ ಅತ್ಯಾಚಾರ ಪ್ರಕರಣದಲ್ಲಿಯೂ ರಾಘವೇಶ್ವರ ಶ್ರೀಗೆ ರಿಲೀಫ್ ಸಿಕ್ಕಿದೆ. ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
2015ರಲ್ಲಿ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಸಿಐಡಿ ಪೊಲೀಸರು ಶ್ರೀಗಳ ವಿರುದ್ಧ ಆರೋಪ ಪಟ್ಟಿ ದಾಖಲಿಸಿದ್ದರು.
ವೈಯಕ್ತಿಕ ವಿವಾಹ ಸಮಸ್ಯೆಯಿಂದ ಮಹಿಳೆ ಕೇಸು ದಾಖಲಿಸಿದ್ದಾರೆ ಎಂದು ವಾದ ಮಂಡಿಸಲಾಗಿತ್ತು.
ರಾಘವೇಶ್ವರ ಸ್ವಾಮೀಜಿ ಪರ ವಕೀಲ ಪಿ.ಎನ್. ಮನಮೋಹನ್ ಅವರು, ವೈಯಕ್ತಿಕ ವೈವಾಹಿಕ ಸಮಸ್ಯೆಯಿಂದ ಮಹಿಳೆ ಕೇಸು ದಾಖಲಿಸಿದ್ದಾರೆ. ದುರುದ್ದೇಶದಿಂದ ಅತ್ಯಾಚಾರ ದೂರು ನೀಡಿದ್ದಾರೆ ಎಂದು ವಾದ ಮಂಡಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠದಿಂದ ಪ್ರಕರಣ ರದ್ದು ಪಡಿಸಿ ಆದೇಶ ನೀಡಲಾಗಿದೆ.