ವಿಶ್ವಕಪ್ ಪಂದ್ಯ ನಡೆಯುವ ಸ್ಟೇಡಿಯಂಗಳ 5ಜಿ ಲಭ್ಯತೆಯ ವಿಷಯದಲ್ಲಿ ಜಿಯೋಗೆ ಅಗ್ರಸ್ಥಾನ

Reliance Jio Leads in Download Speeds at ICC Cricket World Cup 2023 Stadiums

ಐಸಿಸಿ ವಿಶ್ವಕಪ್ 2023 ನಡೆಯಲಿರುವ ಭಾರತದ ಕ್ರಿಕೆಟ್ ಮೈದಾನಗಳಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಇಲ್ಲಿದೆ ಒಳ್ಳೆಯ ಸುದ್ದಿ. ರಿಲಯನ್ಸ್ ಜಿಯೋ ಡೌನ್‌ಲೋಡ್ ವೇಗವು ಏರ್‌ಟೆಲ್‌ಗಿಂತ ಎರಡು ಪಟ್ಟು ವೇಗವಾಗಿದೆ ಮತ್ತು ವೊಡಾಫೋನ್‌ಗಿಂತ 3.5 ಪಟ್ಟು ವೇಗವಾಗಿದೆ.

ಓಪನ್ ಸಿಗ್ನಲ್ ವರದಿಯ ಪ್ರಕಾರ, ಭಾರತೀಯ ಕ್ರಿಕೆಟ್ ಮೈದಾನಗಳ ಒಳಗೆ ಮತ್ತು ಹೊರಗೆ ಅಳೆಯಲಾದ ಡೌನ್‌ಲೋಡ್ ವೇಗದಲ್ಲಿ ಜಿಯೋ ಗೆದ್ದಿದೆ. ರಿಲಯನ್ಸ್ ಜಿಯೋದ ಸರಾಸರಿ ಡೌನ್‌ಲೋಡ್ ವೇಗವನ್ನು 61.7 ಎಂಬಿಪಿಎಸ್ ಎಂದು ಅಳೆಯಲಾಗಿದೆ. ಏರ್‌ಟೆಲ್ 30.5 ಎಂಬಿಪಿಎಸ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ವೊಡಾಫೋನ್ ಐಡಿಯಾ 17.7 ಎಂಬಿಪಿಎಸ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ.

ಓಪನ್ ಸಿಗ್ನಲ್ ವರದಿಯಲ್ಲಿ, 5ಜಿ ಡೌನ್‌ಲೋಡ್ ವೇಗದಲ್ಲಿ ರಿಲಯನ್ಸ್ ಜಿಯೋ ಮೊದಲ ಸ್ಥಾನದಲ್ಲಿದೆ. ಜಿಯೋದ 5ಜಿ ಡೌನ್‌ಲೋಡ್ ವೇಗವು ಏರ್‌ಟೆಲ್‌ಗಿಂತ ಶೇ 25.5ರಷ್ಟು ಹೆಚ್ಚಾಗಿದೆ. ಜಿಯೋದ ಸರಾಸರಿ 5ಜಿ ಡೌನ್‌ಲೋಡ್ ವೇಗವು 344.5 ಎಂಬಿಪಿಎಸ್ ನಲ್ಲಿ ದಾಖಲಾಗಿದ್ದರೆ, ಏರ್‌ಟೆಲ್ 274.5 ಎಂಬಿಪಿಎಸ್ ನೊಂದಿಗೆ ಎರಡನೇ ಸ್ಥಾನದಲ್ಲಿದೆ. ವೊಡಾಫೋನ್ ಐಡಿಯಾ ಸದ್ಯಕ್ಕೆ 5ಜಿ ಸೇವೆಯನ್ನು ಒದಗಿಸುತ್ತಿಲ್ಲ. ಐಸಿಸಿ ವಿಶ್ವಕಪ್ 2023ರ ಪಂದ್ಯಗಳು ದೇಶದ 10 ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಇವುಗಳಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಂತಹ ಹೊಸ ಕ್ರೀಡಾಂಗಣಗಳು ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್‌ನಂತಹವು ಸೇರಿವೆ. ಇದಲ್ಲದೇ ದೆಹಲಿ, ಮುಂಬೈ, ಪುಣೆ, ಹೈದರಾಬಾದ್, ಚೆನ್ನೈ, ಬೆಂಗಳೂರು, ಲಖನೌ ಮತ್ತು ಧರ್ಮಶಾಲಾ ಕ್ರಿಕೆಟ್ ಮೈದಾನಗಳಲ್ಲೂ ಪಂದ್ಯಗಳು ನಡೆಯಲಿವೆ.

ಕ್ರಿಕೆಟ್ ಮೈದಾನಗಳಲ್ಲಿ ಒಟ್ಟಾರೆ ಅಪ್‌ಲೋಡ್ ವೇಗದ ವಿಷಯದಲ್ಲಿ ಬಿರುಸಿನ ಪೈಪೋಟಿ ಇತ್ತು. ಏರ್‌ಟೆಲ್‌ನ ಸರಾಸರಿ ಅಪ್‌ಲೋಡ್ ವೇಗವನ್ನು 6.6 ಎಂಬಿಪಿಎಸ್ ಎಂದು ಅಳೆಯಲಾಗಿದ್ದರೆ, ಜಿಯೋ 6.3 ಎಂಬಿಪಿಎಸ್ ಇದೆ. ವೊಡಾಫೋನ್ ಐಡಿಯಾ ಎಂಬಿಪಿಎಸ್ ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಸರಾಸರಿ 5ಜಿ ಅಪ್‌ಲೋಡ್‌ನಲ್ಲಿ ಏರ್‌ಟೆಲ್ ಅಗ್ರಸ್ಥಾನದಲ್ಲಿದೆ, ಏರ್‌ಟೆಲ್‌ನ ವೇಗ 26.3 ಎಂಬಿಪಿಎಸ್ ಆಗಿದ್ದರೆ, ರಿಲಯನ್ಸ್ ಜಿಯೋ 21.6 ಎಂಬಿಪಿಎಸ್ ಆಗಿತ್ತು.

ಓಪನ್ ಸಿಗ್ನಲ್ ಐಸಿಸಿ ವಿಶ್ವಕಪ್ ಕ್ರೀಡಾಂಗಣಗಳ ಒಳಗೆ ಮತ್ತು ಹೊರಗೆ 5ಜಿ ಸಂಪರ್ಕದ ಲಭ್ಯತೆಯನ್ನು ಪರಿಶೀಲಿಸಿದೆ. ನೆಟ್‌ವರ್ಕ್ ಲಭ್ಯತೆಯನ್ನು ಗ್ರಾಹಕರು 5ಜಿ ನೆಟ್‌ವರ್ಕ್‌ನಲ್ಲಿ ಕಳೆಯುವ ಸಮಯದಿಂದ ಅಳೆಯಲಾಗುತ್ತದೆ. ವರದಿಯ ಪ್ರಕಾರ, ವಿಶ್ವಕಪ್ ಸ್ಟೇಡಿಯಂಗಳಲ್ಲಿ 5ಜಿ ಲಭ್ಯತೆಯ ವಿಷಯದಲ್ಲಿ ಜಿಯೋ ಅಗ್ರಸ್ಥಾನದಲ್ಲಿದೆ. ಜಿಯೋ ಗ್ರಾಹಕರು ಶೇ 53ಕ್ಕಿಂತ ಹೆಚ್ಚು ಸಮಯ 5ಜಿ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿದ್ದರು. ಆದರೆ ಏರ್‌ಟೆಲ್ ಗ್ರಾಹಕರು 5ಜಿ ನೆಟ್‌ವರ್ಕ್‌ಗೆ ಕೇವಲ ಶೇ 20.7ರಷ್ಟು ಸಮಯವನ್ನು ಮಾತ್ರ ಸಂಪರ್ಕಿಸಬಹುದು. ಇದರ ಪ್ರಕಾರ, ಜಿಯೋದ 5ಜಿ ನೆಟ್‌ವರ್ಕ್‌ನ ಲಭ್ಯತೆ ಏರ್‌ಟೆಲ್‌ಗಿಂತ 2.6 ಪಟ್ಟು ಹೆಚ್ಚು ಎಂದು ದಾಖಲಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read