ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಹಾರರ್ ಚಿತ್ರಗಳ ಆರ್ಭಟ ಜೋರಾಗಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಇದೀಗ ನವೀನ್ ಜಿ.ಎಸ್. ನಿರ್ದೇಶನದ ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ನಾ ನಿನ್ನ ಬಿಡಲಾರೆ’ ನಾಳೆ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ಅಂಬಾಲಿ ಭಾರತಿ ಸೇರಿದಂತೆ ಪಂಚಿ, ಕೆ.ಎಸ್. ಶ್ರೀಧರ್, ಶ್ರೀನಿವಾಸ ಪ್ರಭು, ಹರಿಣಿ, ಶ್ರೀಕಾಂತ್ ಬಣ್ಣ ಹಚ್ಚಿದ್ದು, ಕಮಲ ಉಮಾಭಾರತಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಶ್ರೀಮತಿ ಭಾರತಿ ಬಾಲಿ ನಿರ್ಮಾಣ ಮಾಡಿದ್ದಾರೆ. ದೀಪಕ್ ಸಂಕಲನ, ವೀರೇಶ್ ಛಾಯಾಗ್ರಾಹಣ ಹಾಗೂ ಡಿಫರೆಂಟ್ ಡ್ಯಾನಿ ಮತ್ತು ನರಸಿಂಹ ಅವರ ಸಾಹಸ ನಿರ್ದೇಶನವಿದೆ.