ಚಾಮರಾಜನಗರ : ಆಟವಾಡುವ ವೇಳೆ ಸಂಬಂಧಿಕರ ಮಗುವಿಗೆ ಪೆಟ್ಟಾಗಿದ್ದಕ್ಕೆ ಹೆದರಿ 12 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಮೃತ ಬಾಲಕನನ್ನು ಪ್ರಜ್ವಲ್ (12) ಎಂದು ಗುರುತಿಸಲಾಗಿದೆ. ಹನೂರು ತಾಲೂಕಿನ ಲೊಕ್ಕನಹಳ್ಳಿ ನಿವಾಸಿಯಾಗಿರುವ ಶೀಲಾ ಎಂಬುವವರ ಪುತ್ರ ಪ್ರಜ್ವಲ್ ಮೃತಪಟ್ಟಿದ್ದಾನೆ. ಪ್ರಜ್ವಲ್ ತನ್ನ ಸಂಬಂಧಿಕರ ಮಗುವಿನ ಜೊತೆ ಆಟವಾಡುತ್ತಿದ್ದಾಗ ಬಿದ್ದು ಮಗು ಕಾಲಿಗೆ ಪೆಟ್ಟು ಮಾಡಿಕೊಂಡಿದೆ.
ಕೂಡಲೇ ಮಗುವನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಿಂದ ಮನನೊಂದ ಬಾಲಕ ಪ್ರಜ್ವಲ್ ಮಗುವಿಗೆ ಏನಾದರೂ ಆದರೆ ನನಗೆ ಬೈಯುತ್ತಾರೆ ಎಂದು ಹೆದರಿ ಮನೆಯಲ್ಲಿ ಯಾರೂ ಇಲ್ಲದ ವೇಳೆಗೆ ನೇಣಿಗೆ ಶರಣಾಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಬಾಲಕ ತನ್ನ ಪ್ರಾಣ ಬಿಟ್ಟಿದ್ದಾನೆ.
You Might Also Like
TAGGED:12 ವರ್ಷದ ಬಾಲಕ ಆತ್ಮಹತ್ಯೆ.!