ಧಾರವಾಡ : ನವೆಂಬರ್ 15, 2025 ರಂದು ಧಾರವಾಡ ಪೂನಾ ಬೆಂಗಳೂರು ಹೆದ್ದಾರಿ ಹತ್ತಿರದ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ ಬೆಳಿಗ್ಗೆ 9:30 ರಿಂದ ಸಂಜೆ 5:30 ರ ವರೆಗೆ ಮಾವು ಬೆಳೆಯ ಬೇಸಾಯ, ರೋಗ ಹಾಗೂ ಕೀಟ ನಿರ್ವಹಣೆ ಮತ್ತು ಮಾವು ಸಂಸ್ಕರಣೆ ಹಾಗೂ ಮಾರಾಟ ತಂತ್ರಜ್ಞಾನಗಳ ಕುರಿತು ತರಬೇತಿ ಆಯೋಜಿಸಲಾಗಿದೆ.
ತರಬೇತಿ ನಂತರ, ಆಸಕ್ತ ಮಾವು ಬೆಳೆಗಾರನ್ನು ಮಾವು ಬೆಳೆ ತೋಟದ ಕ್ಷೇತ್ರಗಳಿಗೆ, ತಜ್ಞರೊಂದಿಗೆ ಭೇಟಿ ನೀಡಿಸಿ, ತಿಳುವಳಿಕೆ ನೀಡಲಾಗುತ್ತದೆ.
ಆಸಕ್ತ ಮಾವು ಬೆಳೆಗಾರರು ತರಬೇತಿಗೆ ರೂ.500 ಗಳನ್ನು ಸಂದಾಯಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳಲು ಮೊಬೈಲ್ ನಂ: 8277800110 ಗೆ ಸಂಪರ್ಕಿಸಬಹುದು ಎಂದು ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
