BIG NEWS : ‘SSLC ಪರೀಕ್ಷೆ’-2ಕ್ಕೆ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯಲು ನೋಂದಣಿಗೆ ಅವಕಾಶ : ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ

2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1 ಕ್ಕೆ ಕೊರತೆಯಿಂದಾಗಿ ಪರೀಕ್ಷೆಯಿಂದ ಹೊರಗುಳಿದ 15ವರ್ಷ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ 2025ರ ಪರೀಕ್ಷೆ-2ಕ್ಕೆ ಖಾಸಗಿ ಅಭ್ಯರ್ಥಿಯಾಗಿ (CCEPF) ಪರೀಕ್ಷೆ ಬರೆಯಲು ನೋಂದಣಿಗೆ ಅವಕಾಶ ಕಲ್ಪಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ಮಂಡಳಿಯ ಕಾಯ್ದೆ-1966 ನಿಯಮ-37ರನ್ನಯ ಶಾಲಾ ವಿದ್ಯಾರ್ಥಿಯಾಗಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಕುಳಿತುಕೊಳ್ಳಲು ಶಾಲೆಯು ಕಾರ್ಯ ನಿರ್ವಹಿಸಿದ ದಿನಗಳಿಗೆ ಅನುಸಾರ ಕನಿಷ್ಠ ಶೇ.75ರಷ್ಟು ಹಾಜರಾತಿ ಕಡ್ಡಾಯವಾಗಿರುತ್ತದೆ. 2024-25 SSLC ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು, ಹಾಜರಾತಿ ಕೊರತೆಯಿಂದಾಗಿ ವಿದ್ಯಾರ್ಥಿಗಳ ನೋಂದಣಿಯನ್ನು ಮುಖ್ಯ ಶಿಕ್ಷಕರು ಶಾಲಾ ಹಂತದಲ್ಲಿ ರದ್ದುಪಡಿಸಲಾಗಿರುವುದರಿಂದ ಸದರಿ ವಿದ್ಯಾರ್ಥಿಗಳು 2025ರ ಪರೀಕ್ಷೆ-1 ಕ್ಕೆ ಹಾಜರಾಗಲು ಸಾಧ್ಯವಾಗಿರುವುದಿಲ್ಲ.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಹಾಗೂ ಸದರಿ ವಿದ್ಯಾರ್ಥಿಗಳು ಮುಂದಿನ ಉನ್ನತ ಶಿಕ್ಷಣದ ವ್ಯಾಸಂಗದಿಂದ ವಂಚಿತರಾಗದಂತೆ ಕ್ರಮವಹಿಸುವ ಸಲುವಾಗಿ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಮೇ-2025ರ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ-2ಕ್ಕೆ ಖಾಸಗಿ ಅಭ್ಯರ್ಥಿಗಳಾಗಿ (CCEPF) ಪರೀಕ್ಷೆಗೆ ಅನ್ಲೈನ್ ಮೂಲಕ Registration for SSLC-2025 Exam-2 Menu Registration For Private Freshcb Sub-Menu 2 ಅವಕಾಶ ಕಲ್ಪಿಸಲಾಗಿದೆ.

2025ರ ಮಾರ್ಚ್ 01 ನೇ ತಾರೀಖಿಗೆ 15 ವರ್ಷ ವಯೋಮಿತಿ ತುಂಬುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಣಿ ಮಾಡಿಕೊಳ್ಳಲು ಉಲ್ಲೇಖಿತ ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಂತಹ ಅಭ್ಯರ್ಥಿಗಳು ಸರ್ಕಾರಿ/ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಶಾಲೆಗಳಿಗೆ ನೋಂದಣಿಗಾಗಿ ಅರ್ಜಿ ಸಲ್ಲಿಸಬೇಕು. 15 ವರ್ಷ ತುಂಬದ ಅಭ್ಯರ್ಥಿಗಳನ್ನು ನೋಂದಾಯಿಸಿಕೊಂಡಲ್ಲಿ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಎಚ್ಚರಿಸುವುದು ಹಾಗೂ ವಿಧಿಸಿರುವ ಷರತ್ತುಗಳನ್ನು ಈ ಎಲ್ಲಾ ಅರ್ಹ ವಿದ್ಯಾರ್ಥಿಗಳು ಪಾಲಿಸಬೇಕಾಗಿರುತ್ತದೆ. 2025ರ ಪರೀಕ್ಷೆ-2ರಲ್ಲಿ ಈ ಅಭ್ಯರ್ಥಿಗಳಿಗೆ ಪ್ರಥಮ ಪ್ರಯತ್ನವಾಗಿರುತ್ತದೆ, ಈ ಪರೀಕ್ಷೆಯಿಂದ ಸತತ ಆರು ಪ್ರಯತ್ನಗಳ ಒಳಗಾಗಿ ಉತ್ತೀರ್ಣ ಹೊಂದಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ಅವಕಾಶದ ನಂತರವೂ ಪೂರ್ಣಗೊಳಿಸಲಾಗದ (NOT COMPLETED) ಅಭ್ಯರ್ಥಿಗಳು ನಂತರದ ಪರೀಕ್ಷೆಯಿಂದ ನಿಯಮಾನುಸಾರ ಹೊಸದಾಗಿ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಂಡು ಎಲ್ಲಾ ವಿಷಯಗಳ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ವಿದ್ಯಾರ್ಥಿಗಳು ಮಾರ್ಚ್-2025ರ ಪರೀಕ್ಷೆ-1 ಕ್ಕೆ ನೋಂದಾಯಿಸಿ ಈಗಾಗಲೇ ಪರೀಕ್ಷಾ ಶುಲ್ಕ ಪಾವತಿಸಿರುತ್ತಾರೆ. ಆದ್ದರಿಂದ ಸದರಿ ಅಭ್ಯರ್ಥಿಗಳು 2025ರ ಪರೀಕ್ಷೆ-2 ಕ್ಕೆ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿ ಪರೀಕ್ಷೆಗೆ ಹಾಜರಾಗಲು ನೋಂದಣಿ ಶುಲ್ಕವನ್ನು ಮಾತ್ರ ಪಾವತಿಸತಕ್ಕದ್ದು. ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರು ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಲು ಇರುವ ನಿಯಮದಂತೆ ತಮ್ಮ ಶಾಲಾ ಅಭ್ಯರ್ಥಿಗಳನ್ನು ನೋಂದಾಯಿಸಿ ಕೆಳಕಂಡ ದಿನಾಂಕದೊಳಗೆ ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಲು ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read