ಬೆಂಗಳೂರು: 2025-26ನೇ ಸಾಲಿನಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿ ವಿದ್ಯಾರ್ಥಿಯ ತಲಾ ವಾರ್ಷಿಕ ವೆಚ್ಚವನ್ನು ಮರು ನಿಗದಿಪಡಿಸಲಾಗಿದೆ.
ಆರ್.ಟಿ.ಇ ಅಡಿ ಪ್ರವೇಶ ಪಡೆದು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಸಲು, ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 12(2) ಮತ್ತು ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು 2012ರ ನಿಯಮ 4 ರಲ್ಲಿ 8(1)ರಂತೆ ಸರ್ಕಾರದ ಶಾಲೆಗಳಲ್ಲಿ ಪ್ರವೇಶ ಪಡೆದ ಪ್ರತಿ ಮಗುವಿನ ತಲಾ ವಾರ್ಷಿಕ ವೆಚ್ಚದನ್ವಯ 2025-26ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಪ್ರತಿ ಮಗುವಿನ ತಲಾ ವಾರ್ಷಿಕ ವೆಚ್ಚವನ್ನು ಪ್ರಾಥಮಿಕ ತರಗತಿಗಳಿಗೆ ರೂ.16,000/- ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ರೂ.8,000/-ಎಂದು ನಿಗದಿಪಡಿಸಿ ಆದೇಶಿಸಿದೆ.
ಈ ಆದೇಶವನ್ನು ಸರ್ಕಾರದ ಆದೇಶ ಸಂಖ್ಯೆ: ಎಫ್.ಡಿ 03 ಟಿಎಫ್ಪಿ 2025, ದಿನಾಂಕ: 24.09.20250 ಸರ್ಕಾರದ ಪ್ರಧಾನ ಅಧಿಕಾರದನ್ವಯ ಹೊರಡಿಸಿದೆ.


