ʼರೀಲ್ಸ್‌ʼ ಮಾಡುವಾಗಲೇ ದುರಂತ ; ನೋಡನೋಡುತ್ತಿದ್ದಂತೆ ಮಗುವಿನ ಕಣ್ಣೆದುರೇ ಕೊಚ್ಚಿ ಹೋದ ಮಹಿಳೆ | Shocking Video

ಉತ್ತರಾಖಂಡದ ಉತ್ತರಾಕಾಶಿಯ (Uttarkashi) ಮಣಿಕರ್ಣಿಕಾ ಘಾಟ್‌ನಲ್ಲಿ (Manikarnika Ghat) ಸೋಶಿಯಲ್ ಮೀಡಿಯಾ (Social Media) ಹುಚ್ಚಿಗೆ ಮತ್ತೊಂದು ಜೀವ ಬಲಿಯಾಗಿದೆ. ರೀಲ್ಸ್ (Reels) ಮಾಡುವ ಭರದಲ್ಲಿ ಆಯತಪ್ಪಿ ಗಂಗಾ ನದಿಯ (Ganga River) ಪ್ರವಾಹಕ್ಕೆ ಮಹಿಳೆಯೊಬ್ಬರು ಕೊಚ್ಚಿ ಹೋಗಿದ್ದಾರೆ. ಈ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದ್ದು, ಮನಕಲಕುವಂತಿದೆ.

ವಿಡಿಯೋದಲ್ಲಿ ಮಹಿಳೆಯು ರೀಲ್ಸ್ ಮಾಡುವುದಕ್ಕಾಗಿ ನೀರಿನ ಆಳಕ್ಕೆ ಇಳಿಯುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಅಷ್ಟರಲ್ಲಿ ಕಾಲು ಜಾರಿ ಪ್ರಬಲ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಆಕೆಯ ಮಗು “ಅಮ್ಮ” ಎಂದು ಜೋರಾಗಿ ಅಳುತ್ತಿರುವ ದೃಶ್ಯವು ಕರುಳು ಹಿಂಡುವಂತಿದೆ. ವರದಿಯ ಪ್ರಕಾರ, ಈವರೆಗೆ ಪೊಲೀಸರು (Police) ಮಹಿಳೆಯ ಮೃತದೇಹವನ್ನು ಪತ್ತೆ ಮಾಡಲಾಗಿಲ್ಲ.

ಕಳೆದ ವರ್ಷ ಜುಲೈನಲ್ಲಿ ಇದೇ ರೀತಿಯ ದುರಂತ ಮಹಾರಾಷ್ಟ್ರದ (Maharashtra) ರಾಯಗಡ್ (Raigad) ಬಳಿಯ ಕುಂಭೆ ಜಲಪಾತದಲ್ಲಿ (Kumbhe waterfall) ನಡೆದಿತ್ತು. ಪ್ರಸಿದ್ಧ ಟ್ರಾವೆಲ್ ಇನ್‌ಫ್ಲುಯೆನ್ಸರ್ (Travel Influencer) ಆಗಿದ್ದ ಮುಂಬೈ ಮೂಲದ ಆನ್ವಿ ಕಾಮ್ದಾರ್ (Aanvi Kamdar) ಎಂಬ 26 ವರ್ಷದ ಯುವತಿ ಇನ್‌ಸ್ಟಾಗ್ರಾಮ್ ರೀಲ್ (Instagram Reel) ಮಾಡುತ್ತಿದ್ದಾಗ ಆಯತಪ್ಪಿ 350 ಅಡಿ ಆಳದ ಕಣಿವೆಗೆ ಬಿದ್ದು ಸಾವನ್ನಪ್ಪಿದ್ದರು. ಆನ್ವಿ ತಮ್ಮ ಸ್ನೇಹಿತರೊಂದಿಗೆ ವಿಡಿಯೋ ಚಿತ್ರೀಕರಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತ್ತು. ಸುಮಾರು 6 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಆನ್ವಿಯನ್ನು ಕಣಿವೆಯಿಂದ ಹೊರತೆಗೆಯಲಾಯಿತಾದರೂ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಕೊನೆಯುಸಿರೆಳೆದರು.

ಈ ಎರಡು ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ (Likes) ಮತ್ತು ವ್ಯೂವ್ಸ್‌ಗಾಗಿ (Views) ಜನರು ತಮ್ಮ ಜೀವವನ್ನೇ ಪಣಕ್ಕಿಡುತ್ತಿರುವುದಕ್ಕೆ ಕನ್ನಡಿ ಹಿಡಿದಿವೆ. ಇಂತಹ ಅಪಾಯಕಾರಿ ಕೃತ್ಯಗಳನ್ನು ಮಾಡುವುದರಿಂದ ದೂರವಿರಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read