ಕಾರಿನ ಡಿಕ್ಕಿಯಲ್ಲಿ ನೇತಾಡುತ್ತಿದ್ದ ಕೈ ; ನವಿ ಮುಂಬೈನಲ್ಲಿ ಕ್ಷಣಕಾಲ ಆತಂಕ | Watch Video

ನವಿ ಮುಂಬೈನಲ್ಲಿ ಸೋಮವಾರ ಸಂಜೆ ವಿಚಿತ್ರ ಘಟನೆಯೊಂದು ನಡೆದಿದ್ದು, ಕ್ಷಣಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಾಶಿ ಮತ್ತು ಸನ್ಪಾಡಾ ರೈಲು ನಿಲ್ದಾಣಗಳ ನಡುವೆ ಸಂಚರಿಸುತ್ತಿದ್ದ ಕಾರೊಂದರ ಡಿಕ್ಕಿಯಿಂದ ಕೈಯೊಂದು ನೇತಾಡುತ್ತಿರುವುದನ್ನು ಕಂಡ ಸ್ಥಳೀಯರೊಬ್ಬರು ತಕ್ಷಣವೇ ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು.

ನವಿ ಮುಂಬೈ ಪೊಲೀಸರು ಮತ್ತು ಅಪರಾಧ ವಿಭಾಗದ ತಂಡ ಕಾರನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿತು. ಸುಮಾರು 8.30 ರ ಹೊತ್ತಿಗೆ ಘಾಟ್‌ಕೋಪರ್ ಬಳಿ ಕಾರನ್ನು ಪತ್ತೆಹಚ್ಚಿದಾಗ, ಮೂವರು ಯುವಕರು ಲ್ಯಾಪ್‌ಟಾಪ್ ಒಂದರ ಪ್ರಚಾರಕ್ಕಾಗಿ ರೀಲ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಯುವಕರು ಮುಂಬೈನಿಂದ ಮದುವೆ ಸಮಾರಂಭಕ್ಕೆಂದು ನವಿ ಮುಂಬೈಗೆ ಬಂದಿದ್ದರು. ರೀಲ್‌ನಲ್ಲಿ, ಬೈಕ್ ಸವಾರನೊಬ್ಬ ಕಾರನ್ನು ನಿಲ್ಲಿಸಿ ಡಿಕ್ಕಿ ತೆರೆಯಲು ಕೇಳುತ್ತಾನೆ. ಆಗ ಡಿಕ್ಕಿಯಿಂದ ಕೈ ಹೊರಹಾಕಿದ್ದ ಯುವಕ ಡಿಕ್ಕಿ ತೆರೆದು, “ಹೆದರಿಕೊಂಡ್ರಾ ? ನಾನು ಸತ್ತಿಲ್ಲ, ಬದುಕಿದ್ದೇನೆ. ಆದರೆ ಲ್ಯಾಪ್‌ಟಾಪ್ ಮೇಲೆ ನಾವು ನೀಡುತ್ತಿರುವ ಅದ್ಭುತ ಆಫರ್ ಕೇಳಿ” ಎಂದು ಹೇಳುತ್ತಾನೆ.

ಸಹಾಯಕ ಪೊಲೀಸ್ ಆಯುಕ್ತ ಅಜಯ್ ಲಾಂಡ್ಗೆ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಯುವಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಈ ಕೃತ್ಯದಲ್ಲಿ ಯಾವುದೇ ಅನುಮಾನಾಸ್ಪದ ಅಂಶಗಳು ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ. ಸದ್ಯಕ್ಕೆ ಈ ಸಂಬಂಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read