ಕ್ಲೌಡ್ ಕಿಚನ್‌ ನಿಜಕ್ಕೂ ಎಷ್ಟು ಸ್ವಚ್ಛ ? ಪ್ರಶ್ನಿಸುವಂತೆ ಮಾಡಿದೆ ರೆಡ್ಡಿಟ್ ಬಳಕೆದಾರನ ಪೋಸ್ಟ್

ಯಾವುದೇ ಆನ್ಲೈನ್ ಫುಡ್ ಡೆಲಿವರಿ ಅಪ್ಲಿಕೇಶನ್‌ನಿಂದ ಬರುವ ಆರ್ಡರ್‌‌ ಸ್ವೀಕರಿಸಿ ತ್ವರಿತವಾಗಿ ಆಹಾರ ತಯಾರಿಸಿ ಡೆಲಿವರಿಗೆ ಕಳುಹಿಸುವ ಕ್ಲೌಡ್ ಕಿಚನ್‌ಗಳು ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿವೆ.

ಸಾಂಪ್ರದಾಯಿಕ ರೆಸ್ಟೋರೆಂಟ್‌ಗಳಿಗಿಂತ ಬಹಳ ಕಡಿಮೆ ಬಂಡವಾಳ ಬೇಡುವ ಕ್ಲೌಡ್ ಕಿಚನ್‌ಗಳಿಗೆ ಸಾಮಾನ್ಯವಾಗಿ ಗ್ರಾಹಕರು ಭೇಟಿ ಕೊಡದೇ ಇರುವ ಕಾರಣ ಅಲ್ಲಿನ ಸ್ವಚ್ಛತೆಯ ಕುರಿತು ಈಗೀಗ ಪ್ರಶ್ನೆಗಳು ಏಳುತ್ತಿವೆ.

ಬೆಂಗಳೂರಿನಲ್ಲಿರುವ ಕ್ಲೌಡ್ ಕಿಚನ್ ಒಂದರ ನೈರ್ಮಲ್ಯದ ಸ್ಥಿತಿಗತಿಗಳು ಹೇಗಿವೆ ಎಂದು ತೋರುವ ಚಿತ್ರವೊಂದನ್ನು ರೆಡ್ಡಿಟ್ ಬಳಕೆದಾರರೊಬ್ಬರು ಶೇರ್‌ ಮಾಡಿಕೊಂಡಿದ್ದಾರೆ.

ನೆಲದ ಮೇಲೆ ಬಿದ್ದ ಮೋಮೋವೊಂದನ್ನು ಮತ್ತೆ ಸ್ಟೀಮರ್‌ ಒಳಗೆ ಹಾಕುವುದನ್ನು ಈ ಕಿಚನ್‌ನಲ್ಲಿ ತಾನು ನೋಡಿದ್ದಾಗಿ ಹೇಳಿಕೊಂಡಿರುವ ರೆಡ್ಡಿಟ್ ಬಳಕೆದಾರ, ಅಡುಗೆ ಮನೆಯ ಗಲೀಜಿನ ವಾತಾವರಣ ತೋರುವ ಮೂರು ಚಿತ್ರಗಳನ್ನು ಶೇರ್‌ ಮಾಡಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರಿಂದ ಭಾರೀ ಆತಂಕದ ಕಾಮೆಂಟ್‌ಗಳು ಬಂದಿವೆ.

r/bangalore - Cloud kitchens are disgusting

Cloud kitchens are disgusting
byu/dozing_dog inbangalore

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read