ವಿವಾಹೇತರ ಸಂಬಂಧದ ಜಗಳ; ಮನೆಯಲ್ಲಿ ವ್ಯಕ್ತಿಯ ಬೆತ್ತಲೆ ಶವ ಪತ್ತೆ

ವಿವಾಹೇತರ ಸಂಬಂಧದ ಜಗಳದ ವೇಳೆ ನಡೆದ ಅಪರಾಧದಿಂದಾಗಿ ಮನೆಯೊಂದರಲ್ಲಿ ವ್ಯಕ್ತಿಯ ಬೆತ್ತಲೆ ಶವ ಪತ್ತೆಯಾಗಿರೋ ಘಟನೆ ಮಧ್ಯಪ್ರದೇಶದ ಇಂಧೋರ್ ನ ಏರೋಡ್ರೋಮ್ ಪೊಲೀಸ್ ಠಾಣೆಯ ವ್ಯಾಪ್ತಿಯ ದುರ್ಗಾನಗರದಲ್ಲಿ ನಡೆದಿದೆ.

ವ್ಯಕ್ತಿಯನ್ನು ಚಾಕುವಿನಿಂದ ಇರಿದು ಸಾಯಿಸಲಾಗಿದೆ. ಘಟನಾ ಸ್ಥಳದಲ್ಲಿ ಮಹಿಳೆಯೊಬ್ಬರು ಗಾಯಗೊಂಡಿರುವುದು ಕಂಡುಬಂದಿದೆ. ಬದ್‌ನಗರದ ಅಂಕಿತ್ ಬಜರಂಗಿ ಎಂಬಾತ ತನಗೂ ಇರಿದಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸ್ ತನಿಖಾಧಿಕಾರಿಗಳು ಮಾತನಾಡಿ, ಈ ಮನೆಯು ಪವನ್ ಲಿಂಬೋಡಿಯಾ ಅವರ ಒಡೆತನದಲ್ಲಿದೆ. ಒಬ್ಬ ಗಾಯಗೊಂಡ ಮಹಿಳೆ ಕೂಡ ಮನೆಯಲ್ಲಿ ಪತ್ತೆಯಾಗಿದ್ದಾರೆ. ದೇಹದ ತೊಡೆ ಮತ್ತು ಹೊಟ್ಟೆಯ ಮೇಲೆ ಇರಿತದ ಗಾಯಗಳಿವೆ.ಆರೋಪಿ ಮೊದಲು ಚಾಕುವಿನಿಂದ ತನ್ನನ್ನು ತಾನೇ ಇರಿದುಕೊಂಡು ನಂತರ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ ಎಂದಿದ್ದಾರೆ.

ಪ್ರಾಥಮಿಕವಾಗಿ ಮೇಲ್ನೋಟಕ್ಕೆ ಈ ಪ್ರಕರಣವು ವಿವಾಹೇತರ ಸಂಬಂಧದಿಂದ ಉಂಟಾದ ಕೃತ್ಯ ಎಂದು ತಿಳಿದುಬಂದಿದೆ. ಮಹಿಳೆ ಮತ್ತು ಅಂಕಿತ್ ಯಾರದ್ದೋ ಕಣ್ಣಿಗೆ ಸಿಕ್ಕಿಬಿದ್ದಿದ್ದು, ನಂತರ ಅವರು ಅಂಕಿತ್ ನನ್ನು ಕೊಂದು ಮಹಿಳೆಯನ್ನು ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read