BIG NEWS: ಪ್ರಯಾಣಿಕರ ಗಮನಕ್ಕೆ; ಹಳಿ ತಪ್ಪಿದ ರೀ ರೈಲ್; ಈ ಭಾಗದ ಮೆಟ್ರೋ ಸಂಚಾರ ಸ್ಥಗಿತ

ಬೆಂಗಳೂರು: ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ಸಮಸ್ಯೆಯುಂಟಾದಾಗ ಅದನ್ನು ಸರಿಪಡಿಸಲು ಬಳಸುವ ರೀ ರೈಲ್ ಬೆಂಗಳೂರಿನ ರಾಜಾಜಿನಗರ ಮಾರ್ಗದಲ್ಲಿ ಹಳಿತಪ್ಪಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಹಸಿರು ಮಾರ್ಗದ ಮೆಟ್ರೋ ಸಂಚಾರ ತತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ರೀ ರೈಲ್ ವಾಹನ ರಾಜಾಜಿನಗರ ಮೆಟ್ರೋ ತಿರುವಿನಲ್ಲಿ ಹಳಿ ತಪ್ಪಿದ್ದರಿಂದ ಗ್ರೀನ್ ಲೈನ್ ನಲ್ಲಿ ನಮ್ಮ ಮೆಟ್ರೋ ಸಂಚರ ಏಕಮುಖವಾಗಿ ಮಾತ್ರ ಸಂಚಾರ ನಡೆಸುತ್ತಿದೆ. ಇದರಿಂದಾಗಿ ಪ್ರಯಾಣಿಕರು ಪರದಾದುವಂತಾಗಿದೆ.

ರೀ ರೈಲ್ ಹಳಿ ತಪ್ಪಿದ್ದರಿಂದ ಶ್ರೀರಾಂಪುರ, ಕುವೆಂಪು ನಗರ, ರಾಜಾಜಿಗನರ, ಮಹಾಲಕ್ಷ್ಮೀ ಲೇಔಟ್, ಸ್ಯಾಂಡಲ್ ಸೋಪ್ ಫ್ಯಾಕ್ಟರಿ ನಡುವೆ ಮೆರೋ ಸಂಚರ ಸ್ಥಗಿತಗೊಂಡಿದೆ. ಸಧ್ಯ ನಾಗಸಂದ್ರದಿಂದ ಯಶವಂತಪುರ ಹಾಗೂ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದವರೆಗೆ ಮತ್ರ ರೈಲು ಸೇವೆ ಲಭ್ಯವಿರಲಿದೆ. ರೀ ರೈಲ್ ಹಳಿಗೆ ತರಲು ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಗ್ರೀನ್ ಲೈನ್ ಕೆಲ ಮಾರ್ಗದಲ್ಲಿ ಮೆಟ್ರೋ ಬಂದ್ ಆಗಿರುವುದರಿಂದ ಪ್ರಯಾಣಿಕರು ಸಹಕರಿಸುವಂತೆ ಬಿಎಂಆರ್ ಸಿ ಎಲ್ ಮನವಿ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read