ಅಭಿಮಾನಿಗಳ ಕೂಗಿಗೆ ಮಣಿದ ‘RCB’ : ರಿಷಬ್ ಶೆಟ್ಟಿ ಮೂಲಕ ಹೆಸರು ಬದಲಾವಣೆ ಸುಳಿವು ..!

ಬೆಂಗಳೂರು : ಐಪಿಎಲ್ 17 ನೇ ಆವೃತ್ತಿ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಇದರ ನಡುವೆ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ( ಆರ್ ಸಿ ಬಿ) ತಂಡದ ಹೆಸರು ಬದಲಾವಣೆಯ ಚರ್ಚೆ ನಡೆಯುತ್ತಿದೆ.

ಅಭಿಮಾನಿಗಳ ಕೂಗಿಗೆ ಕೊನೆಗೂ ಆರ್ಸಿಬಿ ಮಣಿದಿದ್ದು, ಚಾಲೆಂಜರ್ಸ್ ಬೆಂಗಳೂರು ಇದೀಗ ಹೆಸರು ಬದಲಾವಣೆಯ ಸೂಚನೆ ನೀಡಿದೆ. ಈ ಕುರಿತು ಆರ್ಸಿಬಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.  ಮೂರು ಕೋಣಗಳನ್ನು ನಿಲ್ಲಿಸಲಾಗಿದ್ದು, ಪ್ರತಿಯೊಂದರ ಮೇಲೂ Royal, Challengers, Bangalore ಎನ್ನುವ ಪದಗಳನ್ನು ಬರೆಯಲಾಗಿದೆ . ಮೂರನೇ ಕೋಣದ ಬಳಿ ಬರುವ ರಿಷಬ್, Bangalore ಎಂದು ಬರೆಯಲಾಗಿದ್ದ ಕೋಣವನ್ನು ಇದು ಬೇಡ ಎಂದು ಕಳಿಸುತ್ತಾರೆ. ಕೊನೆಗೆ ಅರ್ಥ ಆಯ್ತಾ? ಎಂದು ಪ್ರಶ್ನಿಸುತ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಐಪಿಎಲ್ 2024ರ ಪಂದ್ಯಾವಳಿ ಆರಂಭಕ್ಕೆ ಮುನ್ನ ಆರ್ಸಿಬಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ವೇಳೆ ಹೆಸರು ಬದಲಾವಣೆ ಕುರಿತು ಅಧಿಕೃತ ಘೋಷಣೆಯಾಗಲಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರನ್ನು ಬದಲಾಯಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿದ್ಧತೆ ನಡೆಸುತ್ತಿದೆ ಎಂದು ಪೋಸ್ಟ್ ಮಾಡಲಾಗಿದೆ.

https://twitter.com/RCBTweets/status/1767754960941511035?ref_src=twsrc%5Etfw%7Ctwcamp%5Etweetembed%7Ctwterm%5E1767754960941511035%7Ctwgr%5Edd0471abb7f5b56851f0e14c31ab1bb383050dbd%7Ctwcon%5Es1_&ref_url=https%3A%2F%2Fwww.kannadaprabha.com%2Fcricket%2F2024%2FMar%2F13%2Frcb-renames-to-royal-challengers-bengaluru-in-rebranding-move-at-unbox-rcb-event

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read