ಬ್ಯಾಂಕ್ ಗ್ರಾಹಕರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಮುಖ್ಯ ಮಾಹಿತಿ ನೀಡಿದೆ. ಕೆವೈಸಿ ನವೀಕರಿಸುವ ಮೂಲಕ ಬ್ಯಾಂಕ್ ಖಾತೆಯನ್ನು ಸಕ್ರಿಯವಾಗಿರಿಸುವಂತೆ ಸೂಚನೆ ನೀಡಲಾಗಿದೆ. ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಶಿಬಿರಕ್ಕೆ ಭೇಟಿ ನೀಡಿ ಸಪ್ಟಂಬರ್ 30ರವರೆಗೆ ಕೆವೈಸಿ ನವೀಕರಿಸಿಕೊಳ್ಳಬಹುದಾಗಿದೆ.
ಕೆವೈಸಿ ಅಪ್ಡೇಟ್ ಗೆ ಈ ದಾಖಲೆಗಳು ಅಗತ್ಯವಾಗಿ ಬೇಕಿದೆ
ಹೆಸರು ಅಥವಾ ವಿಳಾಸ ಬದಲಾವಣೆಯಾಗಿಲ್ಲದಿದ್ದರೆ- ಸ್ವಯಂಘೋಷಣೆ ಸಾಕಾಗುತ್ತದೆ
ಹೆಸರು ಅಥವಾ ವಿಳಾಸ ಬದಲಾಗಿದ್ದರೆ- ನವೀಕರಿಸಿದ ಮಾಹಿತಿಯನ್ನು ಹೊಂದಿರುವ ಇವುಗಳಲ್ಲಿ ಯಾವುದೇ ಒಂದು ದಾಖಲೆ ಬೇಕಾಗುತ್ತದೆ.
ಆಧಾರ್, ವೋಟರ್ ಐಡಿ ಕಾರ್ಡ್, ನರೇಗಾ ಜಾಬ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದ ಹೊರಡಿಸಲಾದ ಪತ್ರ
ನಿಮ್ಮ ಬ್ಯಾಂಕಿನ ಹತ್ತಿರದ ಶಾಖೆಗೂ ಭೇಟಿ ನೀಡಿ ನಿಮ್ಮ ಕೆವೈಸಿ ನವೀಕರಿಸಿಕೊಳ್ಳಬಹುದಾಗಿದೆ.
ವಿವರಗಳಿಗಾಗಿ https://rbikehtahal.rbl.org.in/KYC ಗೆ ಭೇಟಿ ನೀಡಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.