BIG BREAKING: ಮತ್ತೆ ರೆಪೊ ದರ ಹೆಚ್ಚಿಸಿದ RBI; ಶೇ. 0.25 ರಷ್ಟು ಹೆಚ್ಚಳದೊಂದಿಗೆ ಶೇ. 6.5 ಕ್ಕೆ ಏರಿಕೆ; ಹೆಚ್ಚಾಗಲಿದೆ ಬಡ್ಡಿದರ, ಇಎಂಐ ಹೊರೆ

ಮುಂಬೈ: ಆರ್‌ಬಿಐ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ 6.5% ಗೆ ಹೆಚ್ಚಿಸಿದೆ ಎಂದು ಬಿಐ ಗವರ್ನರ್ ಶಕ್ತಿಕಾಂತ ದಾಸ್ ಘೋಷಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಅನೇಕ ಘಟನೆಗಳು ಪ್ರಪಂಚದಾದ್ಯಂತ ವಿತ್ತೀಯ ನೀತಿಯನ್ನು ಪರೀಕ್ಷಿಸಿವೆ. ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳು ಆರ್ಥಿಕ ಚಟುವಟಿಕೆಯನ್ನು ಬೆಂಬಲಿಸುವ ಮತ್ತು ಹಣದುಬ್ಬರವನ್ನು ನಿಯಂತ್ರಿಸುವ ಮೂಲಕ ನೀತಿ ವಿಶ್ವಾಸಾರ್ಹತೆಯನ್ನು ಕಾಪಾಡುವ ನಡುವೆ ತೀಕ್ಷ್ಣವಾದ ವಿನಿಮಯವನ್ನು ಎದುರಿಸುತ್ತಿವೆ ಎಂದು ತಿಳಿಸಿದ್ದಾರೆ.

ಆರ್.ಬಿ.ಐ. ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಮುಂಬೈನಲ್ಲಿ ನಡೆದ ಮೂರು ದಿನಗಳ ಹಣಕಾಸು ನೀತಿ ಪರಾಮರ್ಶ ಸಭೆ ಬಳಿಕ ರೆಪೊ ದರ ಏರಿಕೆ ಕುರಿತಂತೆ ನಿರ್ಧಾರ ಪ್ರಕಟಿಸಲಾಗಿದ್ದು, ಶೇಕಡ 0.25ರಷ್ಟು ಹೆಚ್ಚಳವಾಗಿದೆ. ರೆಪೊ ದರ ಏರಿಕೆಯಿಂದಾಗಿ ಗೃಹ, ವಾಹನ ಸೇರಿದಂತೆ ವಿವಿಧ ಸಾಲಗಳ ಬಡ್ಡಿದರ ಏರಿಕೆಯಾಗಿ ಇಎಂಐ ಹೊರೆಯಾಗಲಿದೆ.

https://twitter.com/ANI/status/1623179327142768647

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read