FY2024 ರಲ್ಲಿ ಭಾರತದ ಆರ್ಥಿಕತೆ 7.3% ರಷ್ಟು ಬೆಳವಣಿಗೆ: RBI ಗರ್ವನರ್ ವಿಶ್ವಾಸ

ಮುಂಬೈ: ರಾಷ್ಟ್ರೀಯ ಅಂಕಿಅಂಶ ಕಚೇರಿ(ಎನ್‌ಎಸ್‌ಒ) ಬಿಡುಗಡೆ ಮಾಡಿದ ಮೊದಲ ಮುಂಗಡ ಅಂದಾಜಿನ ಪ್ರಕಾರ, 2024ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡ 7.3 ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ(ಡಬ್ಲ್ಯುಇಎಫ್) ಅಂಗವಾಗಿ ನಡೆದ ಸಂವಾದದಲ್ಲಿ ಅವರು, ಮುಂದಿನ ವರ್ಷಗಳಲ್ಲಿ ಭಾರತದ ಬೆಳವಣಿಗೆಯ ವೇಗವನ್ನು ಉಳಿಸಿಕೊಳ್ಳಲಾಗುವುದು. ಭಾರತದ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಅವರು ಹೇಳಿದರು. ಅವರು ಹೇಳಿದ್ದಾರೆ.

ಇದು ಒನ್ ಆಫ್ ಕಾಮೆಂಟ್ ಅಲ್ಲ. ಆದರೆ, ಬಹಳಷ್ಟು ‘ಆಂತರಿಕ’ ಸಂಶೋಧನೆ ಮತ್ತು ವಿಶ್ಲೇಷಣೆಯನ್ನು ಆಧರಿಸಿದೆ. FY2021 ರಲ್ಲಿ ಶೇಕಡ 5.8 ರಷ್ಟು ಸಂಕೋಚನದ ನಂತರ, ಭಾರತೀಯ ಆರ್ಥಿಕತೆಯು FY2022 ರಲ್ಲಿ 9.1 ಶೇಕಡಾ ಮತ್ತು FY2023 ರಲ್ಲಿ ಶೇಕಡಾ 7.2 ರಷ್ಟು ಬೆಳೆದಿದೆ ಎಂದು ಮಾಹಿತಿ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read