ಬ್ಯಾಂಕ್ ಠೇವಣಿ ಲಾಕರ್ ಒಪ್ಪಂದ ನವೀಕರಣ ಗಡುವು ವಿಸ್ತರಿಸಿದ ಆರ್.ಬಿ.ಐ.

ಭಾರತೀಯ ರಿಸರ್ವ್ ಬ್ಯಾಂಕ್ 2023 ರ ಡಿಸೆಂಬರ್ 31 ರೊಳಗೆ ಹಂತ ಹಂತವಾಗಿ ಅಸ್ತಿತ್ವದಲ್ಲಿರುವ ಸುರಕ್ಷಿತ ಠೇವಣಿ ಲಾಕರ್‌ಗಳಿಗೆ ಒಪ್ಪಂದಗಳ ನವೀಕರಣಕ್ಕೆ ಗಡುವು ವಿಸ್ತರಿಸಿದೆ.

ಪರಿಷ್ಕೃತ ಒಪ್ಪಂದಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯ ಗ್ರಾಹಕರು ಸಹಿ ಹಾಕದಿರುವುದು ಗಮನಕ್ಕೆ ಬಂದಿದ್ದರಿಂದ ಗಡುವನ್ನು ವಿಸ್ತರಿಸಲಾಗಿದೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ,

ಅನೇಕ ಸಂದರ್ಭಗಳಲ್ಲಿ ಬ್ಯಾಂಕ್‌ ಗಳು ಒಪ್ಪಂದವನ್ನು ಪರಿಷ್ಕರಣೆ.ಅಗತ್ಯತೆಯ ಬಗ್ಗೆ ಗ್ರಾಹಕರಿಗೆ ತಿಳಿಸುವುದಿಲ್ಲ. ಅಂತೆಯೇ, ಎಲ್ಲಾ ಗ್ರಾಹಕರಿಗೆ ಪರಿಷ್ಕೃತ ಒಪ್ಪಂದ ಅಗತ್ಯತೆಗಳ ಬಗ್ಗೆ 2023 ರ ಏಪ್ರಿಲ್ 30 ರೊಳಗೆ ತಿಳಿಸಲು ಹೇಳಿದೆ. ಜೂನ್ 30 ರೊಳಗೆ ಬ್ಯಾಂಕ್‌ ಗಳು ಕನಿಷ್ಠ 50 ಪ್ರತಿಶತದಷ್ಟು ನೋಂದಣಿಗಳನ್ನು ಮತ್ತು ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇಕಡ 75 ರಷ್ಟು ನೋಂದಣಿಗಳನ್ನು ಪೂರ್ಣಗೊಳಿಸಬೇಕು ಎಂದು ಆರ್‌ಬಿಐ ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read