ರಾಜಮೌಳಿ ನಿರ್ದೇಶನದ ರವಿತೇಜ ನಟನೆಯ ವಿಕ್ರಮಾರ್ಕುಡು ಚಿತ್ರ 2006 ಜೂನ್ ನಲ್ಲಿ ತೆರೆಕಂಡಿತ್ತು ಕಳೆದ ತಿಂಗಳಿಗೆ ವಿಕ್ರಮಾರ್ಕುಡು ರಿಲೀಸ್ ಆಗಿ ಸುಮಾರು 22 ವರ್ಷಗಳಾಗಿವೆ. ನೂರು ದಿನಗಳ ಕಾಲ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಟಾಲಿವುಡ್ ನಲ್ಲಿ ಹೊಸ ದಾಖಲೆ ಬರೆದಿದ್ದ ಈ ಸಿನಿಮಾ ಇದೀಗ ರೀ ರಿಲೀಸ್ ಆಗುತ್ತಿದೆ. ಇದೇ ಜುಲೈ 27ರಂದು ಸಿನಿಮಾ ಮರು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ಈ ಚಿತ್ರದಲ್ಲಿ ರವಿತೇಜ ಸೇರಿದಂತೆ ಅವರಿಗೆ ಜೋಡಿಯಾಗಿ ಅನುಷ್ಕಾ ಶೆಟ್ಟಿ ಅಭಿನಯಿಸಿದ್ದು, ಅಜಯ್ ವಿನೀತ್ ಕುಮಾರ್, ರಾಜೀವ್ ಕಣಕಾಲ, ರುತಿಕಾ, ಬ್ರಹ್ಮಾನಂದಂ, ಅಮಿತ್ ತಿವಾರಿ, ರಘು ಬಾಬು, ಜಯಪ್ರಕಾಶ್ ರೆಡ್ಡಿ, ಪ್ರಭಾಸ್ ಶ್ರೀನು, ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಶ್ರೀ ಕೀರ್ತಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಎಂ ಎಲ್ ಕುಮಾರ್ ಚೌದರಿ ನಿರ್ಮಾಣ ಮಾಡಿದ್ದು, ಕೋಟಗಿರಿ ವೆಂಕಟೇಶ್ವರರಾವ್ ಅವರ ಸಂಕಲನವಿದೆ. ಇನ್ನುಳಿದಂತೆ ಎಂಎಂ ಕೀರವಾಣಿ ಸಂಗೀತ ಸಂಯೋಜನೆ ನೀಡಿದ್ದಾರೆ.
Get ready for #SSRajamouli and #RaviTeja's Biggest MASS Blockbuster movie #Vikramarkudu, re-releasing on July 27, 2024!💥#Vikramarkudu4K 🚨@ssrajamouli @RaviTeja_offl @MsAnushkaShetty @mmkeeravaani #SriKeerthiCreations @MangoMassMedia #TeluguFilmNagar pic.twitter.com/swias3VC7k
— Telugu FilmNagar (@telugufilmnagar) July 18, 2024