ಮೈ ಜುಂ ಎನಿಸುವ ಥ್ರಿಲ್ಲರ್ ! ‘ರಾಟ್ಸಸನ್’ ಕಥೆ ಕೇಳಿದ್ರೆ ನಿದ್ದೆ ಬರಲ್ಲ !

ಥ್ರಿಲ್ಲರ್ ಸಿನಿಮಾಗಳಿಗೊಂದು ವಿಶೇಷವಾದ ಮೋಡಿ. ಕೊನೆಯವರೆಗೂ ಕುತೂಹಲ ಕೆರಳಿಸುವ ಕಥೆ, ಊಹಿಸಲಾಗದ ತಿರುವುಗಳು, ಕೊಲೆಗಾರ ಯಾರು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದ್ದರೆ, ಆ ಸಿನಿಮಾ ನಿಜಕ್ಕೂ ಗೆದ್ದಂತೆ. ಓಟಿಟಿ ವೇದಿಕೆಗಳಲ್ಲಿ ಥ್ರಿಲ್ಲರ್ ಸಿನಿಮಾಗಳು ಹೇರಳವಾಗಿದ್ದರೂ, ಉತ್ತಮವಾದ ಚಿತ್ರವನ್ನು ಹುಡುಕುವುದು ಕಷ್ಟವೇ ಸರಿ.

ಆದರೆ, ಭಾರತೀಯ ಚಿತ್ರರಂಗದಲ್ಲೂ ಇಂತಹ ಅದ್ಭುತ ಥ್ರಿಲ್ಲರ್‌ಗಳು ಮೂಡಿಬಂದಿವೆ. ಕೇವಲ ಹಣ ಗಳಿಸುವುದಷ್ಟೇ ಗುರಿಯಿಲ್ಲದೆ, ಉತ್ತಮ ಕಥೆಗಳನ್ನು ಹೇಳುವ ಕೆಲವು ಸಿನಿಮಾಗಳಿವೆ. ಅಂತಹ ಒಂದು ಚಿತ್ರ 2018 ರಲ್ಲಿ ತಮಿಳಿನಲ್ಲಿ ತಯಾರಾದ ‘ರಾಟ್ಸಸನ್’. ಈ ಚಿತ್ರಕ್ಕೆ ಐಎಮ್‌ಡಿಬಿಯಲ್ಲಿ 8.3 ರೇಟಿಂಗ್ ಲಭಿಸಿದೆ.

‘ರಾಟ್ಸಸನ್’ ಅಂದರೆ ‘ರಾಕ್ಷಸ’ ಎಂದರ್ಥ. ರಾಮ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ವಿಷ್ಣು ವಿಶಾಲ್, ಅಮಲಾ ಪಾಲ್ ಮತ್ತು ರಾಧಾ ರವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕಥೆಯು ಸರಣಿ ಕೊಲೆಗಾರನೊಬ್ಬ ಹದಿಹರೆಯದ ಹುಡುಗಿಯರನ್ನು ಬೇಟೆಯಾಡಿ ಅವರನ್ನು ಭಯಾನಕವಾಗಿ ಕೊಲ್ಲುವುದರ ಸುತ್ತ ಸುತ್ತುತ್ತದೆ. ಈ ಕೊಲೆಗಳನ್ನು ತನಿಖೆ ಮಾಡುವ ಉಪ-ಪೊಲೀಸ್ ಅಧಿಕಾರಿಯೊಬ್ಬನ ಪಾತ್ರ ಮತ್ತು ಆ ಕೊಲೆಗಳು ಅವನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಚಿತ್ರದ ಪ್ರಮುಖ ಅಂಶ. ಹಿನ್ನೆಲೆ ಸಂಗೀತ ಚಿತ್ರದ ರೋಚಕತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಚಿತ್ರಕಥೆಗಾಗಿ ಬರಹಗಾರರು ಸುಮಾರು ಎರಡು ವರ್ಷಗಳನ್ನು ತೆಗೆದುಕೊಂಡಿದ್ದಾರೆ ಎಂಬುದು ಗಮನಾರ್ಹ.

ಸುಮಾರು 2 ಗಂಟೆ 23 ನಿಮಿಷಗಳ ಈ ಚಿತ್ರವನ್ನು 20 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಈ ಚಿತ್ರ ತೆಲುಗಿನಲ್ಲಿ ‘ರಾಕ್ಷಸುಡು’ ಎಂದು ರಿಮೇಕ್ ಆಗಿ ಯಶಸ್ವಿಯಾಗಿದೆ. ಇದೀಗ ಹಿಂದಿಯಲ್ಲಿ ‘ಕಟ್ಪುಟ್ಲಿ’ ಎಂಬ ಹೆಸರಿನಲ್ಲಿ ಅಕ್ಷಯ್ ಕುಮಾರ್, ರಾಕುಲ್ ಪ್ರೀತ್ ಸಿಂಗ್ ಅವರಂತಹ ದೊಡ್ಡ ತಾರಾಗಣದೊಂದಿಗೆ ಮರುನಿರ್ಮಾಣಗೊಂಡಿದೆ. ಒಂದು ಅತ್ಯುತ್ತಮ ಥ್ರಿಲ್ಲರ್ ಸಿನಿಮಾ ನೋಡಲು ಬಯಸುವವರಿಗೆ ‘ರಾಟ್ಸಸನ್’ ಒಂದು ಅದ್ಭುತ ಆಯ್ಕೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read