ಉಡುಪಿ: ಹಿಂದೂ ಜಾಗರಣಾ ವೇದಿಕೆ ಮುಖಂಡ ರತ್ನಾಕರ್ ಅಮೀನ್ ಅವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಸ್ಫೋಟ ಖಂಡಿಸಿ ನಡೆಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರತ್ನಾಕರ್ ಅಮೀನ್, ಪ್ರಚೋದನಕಾರಿ ಭಾಷಾ ಮಾಡಿದ್ದರು. ಮದರಸಾ, ಮಸೀದಿಯಲ್ಲಿ ಹಿಂದೂಗಳ ಹತ್ಯೆಗೆ ಪ್ರಚೋದನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ದ್ವೇಷ, ಅಸೂಯೆ ಉಂಟುಮಾಡುವ ಹೇಳಿಕೆ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಸ್ವಯಂ ಪ್ರೇರಿತ ಕೇಸ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಉಡುಪಿಯ ಅಜೇಕಾರಿನ ನಿವಾಸಿ , ಹಿಂದೂ ಜಾಗರಣಾ ವೇದಿಕೆ ಮುಖಂಡ ರತ್ನಾಕರ್ ಅವರನ್ನು ಬಂಧಿಸಲಾಗಿದೆ.
