ಬಿಪಿಎಲ್ ಕಾರ್ಡ್ ಸೇರಿ ಪಡಿತರ ಚೀಟಿ ಹೊಂದಿದವರಿಗೆ ಗುಡ್ ನ್ಯೂಸ್

ಕಲಬುರಗಿ: ಅಂತ್ಯೋದಯ ಅನ್ನ(ಎಎವೈ), ಆದ್ಯತಾ (ಪಿಹೆಚ್‍ಹೆಚ್), ಆದ್ಯತಾ (ಪಿಹೆಚ್‍ಎಚ್) ಹೆಚ್ಚುವರಿ 1 ಕೆ.ಜಿ. ಹಾಗೂ ಆದ್ಯತೇತರ (ಎನ್‍ಪಿಹೆಚ್‍ಹೆಚ್) (ಒಪ್ಪಿತ ಪಡಿತರ ಚೀಟಿ) ಪಡಿತರ ಕಾರ್ಡುದಾರರಿಗೆ ಇದೇ ಮೇ ಮಾಹೆಯಲ್ಲಿ ಕೆಳಗಿನಂತೆ ಪಡಿತರ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ.

ಅಂತ್ಯೋದಯ ಅನ್ನ(ಎಎವೈ): 21 ಕೆ.ಜಿ. ಅಕ್ಕಿ ಮತ್ತು 14 ಕೆ.ಜಿ. ಜೋಳ ಸೇರಿದಂತೆ ಪ್ರತಿ ಪಡಿತರ ಚೀಟಿದಾರರಿಗೆ ಒಟ್ಟು 35 ಕೆ.ಜಿ. ಪಡಿತರವನ್ನು ಉಚಿತವಾಗಿ ವಿತರಿಸಲಾಗುವುದು.

 ಆದ್ಯತಾ (ಪಿಹೆಚ್‍ಹೆಚ್): 3 ಕೆ.ಜಿ. ಅಕ್ಕಿ ಮತ್ತು 2 ಕೆ.ಜಿ. ಜೋಳ ಸೇರಿದಂತೆ ಪ್ರತಿ ಪಡಿತರ ಸದಸ್ಯರಿಗೆ ಒಟ್ಟು 5 ಕೆ.ಜಿ. ಪಡಿತರವನ್ನು ಉಚಿತವಾಗಿ ವಿತರಿಸಲಾಗುವುದು.

ಆದ್ಯತಾ(ಪಿಹೆಚ್‍ಹೆಚ್) ಹೆಚ್ಚುವರಿ 1 ಕೆ.ಜಿ.: 1 ಕೆ.ಜಿ. ಹೆಚ್ಚುವರಿಯಾಗಿ ಅಕ್ಕಿ  ಪ್ರತಿ ಪಡಿತರ ಸದಸ್ಯರಿಗೆ ಉಚಿತವಾಗಿ ವಿತರಿಸಲಾಗುವುದು.

ಆದ್ಯತೇತರ (ಎನ್‍ಪಿಹೆಚ್‍ಹೆಚ್) (ಒಪ್ಪಿತ ಪಡಿತರ ಚೀಟಿ): ಏಕ ಸದಸ್ಯ ಪಡಿತರ ಚೀಟಿಗೆ 5 ಕೆ.ಜಿ. ಅಕ್ಕಿ ಹಾಗೂ ಎರಡು ಮತ್ತು ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ. ಅಕ್ಕಿಯನ್ನು ಪ್ರತಿ ಕೆ.ಜಿ.ಗೆ 15 ರೂ.ರಂತೆ ವಿತರಿಸಲಾಗುತ್ತದೆ.

ಪೋರ್ಟೆಬಿಲಿಟಿ: ಅಂತರ್‍ರಾಜ್ಯ ಪೋರ್ಟೆಬಿಲಿಟಿ ಮೂಲಕ ಪಡಿತರ ಪಡೆಯುವವರಿಗೆ ಕೇಂದ್ರ ಸರ್ಕಾರದ ಆದೇಶದಂತೆ ಉಚಿತವಾಗಿ ಪಡಿತರ ವಿತರಣೆ ಮಾಡಲಾಗುವುದು.

ಕಲಬುರಗಿ ಜಿಲ್ಲೆಯ 62,921 ಅಂತ್ಯೋದಯ ಅನ್ನ ಪಡಿತರ ಚೀಟಿಗಳ 2,43,747 ಸದಸ್ಯರಿಗೆ ಮತ್ತು 5,08,638 ಆದ್ಯತಾ ಪಡಿತರ ಚೀಟಿಗಳ 17,38,971 ಸದಸ್ಯರಿಗೆ ಹಾಗೂ 21,063 ಎಪಿಎಲ್ (ವಿಲ್ಲಿಂಗನೆಸ್) ಪಡಿತರ ಚೀಟಿದಾರರಿಗೆ ಕೆಳಗಿನ ಪ್ರಮಾಣದಂತೆ ಪಡಿತರವನ್ನು ವಿತರಿಸಲಾಗುವುದು.

ಕಲಬುರಗಿ ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ 2023ರ ಮೇ ಮಾಹೆಯಲ್ಲಿ ಮೇಲ್ಕಂಡ ಪ್ರಮಾಣದಲ್ಲಿ ಪಡಿತರ ಆಹಾರಧಾನ್ಯ ಪಡೆಯಬೇಕೆಂದು ಕಲಬುರಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read