ಪಡಿತರ ಚೀಟಿದಾರರಿಗೆ ಶಾಕ್: ಸರ್ವರ್ ಸಮಸ್ಯೆಯಿಂದ ರೇಷನ್ ಗಾಗಿ ಬಿಪಿಎಲ್ ಕಾರ್ಡ್ ದಾರರ ಪರದಾಟ; ಹಲವೆಡೆ ಎಪಿಎಲ್ ಗೆ ಆಹಾರಧಾನ್ಯ ಸ್ಥಗಿತ

ಎಪಿಎಲ್ ಕಾರ್ಡ್ ದಾರರಿಗೆ ನೀಡಲಾಗುತ್ತಿದ್ದ ಅಕ್ಕಿ ವಿತರಣೆ ಸುಮಾರು ಆರು ತಿಂಗಳಿನಿಂದ ನಿಲ್ಲಿಸಲಾಗಿದೆ. ಕೆಲವೆಡೆ ಮಾತ್ರ ಪೂರೈಕೆಯಾಗುತ್ತಿದೆ ಎಂದು ಹೇಳಲಾಗಿದೆ.

ಆಹಾರ ಇಲಾಖೆ ಎಪಿಎಲ್ ಕುಟುಂಬಗಳಿಗೆ ಕನಿಷ್ಠ 5 ಕೆಜಿ, ಗರಿಷ್ಠ 10 ಕೆಜಿ ಆಹಾರ ಧಾನ್ಯ ವಿತರಿಸುತ್ತಿದೆ. ಏಕ ಸದಸ್ಯ ಕುಟುಂಬಕ್ಕೆ 5 ಕೆಜಿ ಅಕ್ಕಿ ಮತ್ತು ಇಬ್ಬರು ಹಾಗೂ ಹೆಚ್ಚಿನ ಸದಸ್ಯರನ್ನು ಹೊಂದಿದ ಕುಟುಂಬಕ್ಕೆ 10 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ 15 ರೂಪಾಯಿ ದರದಲ್ಲಿ ನೀಡಲಾಗುವುದು. ಇದಕ್ಕಾಗಿ ಭಾರತ ಆಹಾರ ನಿಗಮದಿಂದ ನಡೆಸುವ ಇ -ಹರಾಜಿನಲ್ಲಿ ಅಕ್ಕಿ ಖರೀದಿಸಲಾಗುತ್ತದೆ.

ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿಗೆ ಉಚಿತವಾಗಿ, ಎಪಿಎಲ್ ಕಾರ್ಡ್ ದಾರರಿಗೆ ಪ್ರತಿ ಕೆಜಿಗೆ 15 ರೂಪಾಯಿಯಂತೆ 150 ರೂಪಾಯಿಗೆ 10 ಕೆಜಿ ವಿತರಿಸಲಾಗುತ್ತದೆ. ಕಳೆದ ಸೆಪ್ಟೆಂಬರ್ ನಿಂದ ಎಪಿಎಲ್ ಕಾರ್ಡ್ ದಾರರಿಗೆ ಹಲವು ಕಡೆ ಅಕ್ಕಿ ಸಿಗುತ್ತಿಲ್ಲ. ನ್ಯಾಯ ಬೆಲೆ ಅಂಗಡಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗಿದೆ.

ಬಿಪಿಎಲ್ ಕಾರ್ಡ್ ದಾರರಿಗೆ ಸರ್ವರ್ ಸಮಸ್ಯೆ ಯಿಂದ ಸರಿಯಾಗಿ ರೇಷನ್ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ತಿಂಗಳು ಇದುವರೆಗೆ ಶೇಕಡ 20 ರಷ್ಟು ಮಾತ್ರ ಪಡಿತರ ವಿತರಣೆ ಮಾಡಲಾಗಿದೆ. ಸರ್ವರ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಪಡೆಯಲು ಪಡಿತರ ಚೀಟಿದಾರರು ಪರದಾಡುವಂತಾಗಿದೆ. ಈ ತಿಂಗಳು ಶೇಕಡ 100 ರಷ್ಟು ಪಡಿತರ ಎತ್ತುವಳಿ ಕಷ್ಟವಾಗಲಿದೆ.

ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಮಸ್ಯೆ ಹೆಚ್ಚಾಗಿದೆ. ಇನ್ನು ಕೇವಲ ಎಂಟು ದಿನಗಳು ಬಾಕಿ ಉಳಿದಿದ್ದು, ಶೇಕಡ 100ರಷ್ಟು ಪಡಿತರ ವಿತರಿಸಿಬೇಕಾದ ಒತ್ತಡಕ್ಕೆ ನ್ಯಾಯಬೆಲೆ ಅಂಗಡಿ ಮಾಲೀಕರು ಸಿಲುಕಿದ್ದಾರೆ. ಸರ್ವರ್ ಸಮಸ್ಯೆ ಉಂಟಾಗುತ್ತಿರುವುದರಿಂದ ಬಯೋಮೆಟ್ರಿಕ್ ಬದಲಿಗೆ ಮೊಬೈಲ್ ಒಟಿಪಿ ಮೂಲಕ ರೇಷನ್ ವಿತರಿಸಲು ಅನುಕೂಲ ಕಲ್ಪಿಸುವಂತೆ ಕೋರಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read