ಪಡಿತರ ಚೀಟಿದಾರರೇ ಗಮನಿಸಿ : ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ ಪಡಿತರ, 5 ಕೆಜಿ ಅಕ್ಕಿ ಹಣ!

ಬೆಂಗಳೂರು : ಪಡಿತರ ಚೀಟಿದಾರರಿಗೆ ಆಹಾರ ಇಲಾಖೆಯು ಮಹತ್ವದ ಮಾಹಿತಿ ನೀಡಿದ್ದು, ಆಗಸ್ಟ್ 31 ರೊಳಗೆ ಪಡಿತರ ಚೀಟಿದಾರರು ಇ-ಕೆವೈಸಿ ಮಾಡದಿದ್ದರೆ ರೇಷನ್ ಕಾರ್ಡ್ ನಲ್ಲಿರುವ ಹೆಸರು ರದ್ದಾಗಲಿದೆ ಎಂದು ತಿಳಿಸಿದೆ.

ಪಡಿತರದಾರರು ತಪ್ಪದೇ ಇ-ಕೆವೈಸಿ ಮಾಡಬೇಕು. ಇಲ್ಲವಾದಲ್ಲಿ ನಿಮಗೆ ರೇಷನ್ ಸಿಗಲ್ಲ. ಅನೇಕರು ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಗೆ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿಲ್ಲ, ದಯವಿಟ್ಟು ಈ ಕೆಲಸ ಮಾಡಿಕೊಳ್ಳಿ. ಹಾಗೂ ಕುಟುಂಬ ಸದಸ್ಯರ e-kyc ಅಪ್ಡೇಟ್ ಆಗದಿರುವುದು ಅಥವಾ ನೀಡಿರುವ ಆಧಾರ್ ಕಾರ್ಡ್ ಮಾಹಿತಿ ತಪ್ಪಾಗಿರುವುದು , ಬ್ಯಾಂಕ್ ಅಕೌಂಟ್ ಮಾಹಿತಿ ನೀಡಿರುವುದು ಈ ಎಲ್ಲಾ ಕಾರಣದಿಂದ ಹಲವರು ಅನ್ನಭಾಗ್ಯ ಯೋಜನೆ ಹಣದಿಂದ ವಂಚಿತರಾಗಿದ್ದಾರೆ. ಆದ್ದರಿಂದ ತಪ್ಪದೇ ನೀವು ಈ ಕೆಲಸ ಮಾಡಬೇಕು.

ಆಗಸ್ಟ್‌ ಒಳಗೆ ಇ-ಕೆವೈಸಿ ಮಾಡದೇ ಇರುವವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಸೌಲಭ್ಯ ನೀಡದಿರಲು ಆಹಾರ ಇಲಾಖೆ ನಿರ್ಧರಿಸಿದೆ. ಹೀಗಾಗಿ ಇ ಕೆವೈಸಿ ಮಾಡಲು ಬಾಕಿ ಇರುವವರಿಗೆ ಆ. 31ರ ಕೊನೆಯ ಗಡುವು ನೀಡಲಾಗಿದೆ. ಒಂದು ವೇಳೆ ಮಾಡಿಸದಿದ್ದಲ್ಲಿ ಅಂತಹ ಸದಸ್ಯಗಳನ್ನು ಪಡಿತರ ಚೀಟಿಯಿಂದ ಅಮಾನತುಗೊಳಿಸುವ ಜತೆಗೆ ಫಲಾನುಭವಿಗಳಿಗೆ ಆಹಾರಧಾನ್ಯ ಮತ್ತು ಡಿಬಿಟಿ ನಗದು ಸೌಲಭ್ಯವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read