ಪಡಿತರ ಚೀಟಿದಾರರೇ ಗಮನಿಸಿ : ʻರೇಷನ್ ಕಾರ್ಡ್ʼ ನಲ್ಲಿ ನಿಮ್ಮ ಹೆಸರು ಸೇರ್ಪಡೆಯಾಗಿದೆಯಾ ಅಂತ ಈ ರೀತಿ ಪರಿಶೀಲಿಸಿ

ಬೆಂಗಳೂರು : ಬಡ ಜನತೆಗೆ ಸರ್ಕಾರವು ಅನೇಕ ಪ್ರಯೋಜನಕಾರಿ ಮತ್ತು ಕಲ್ಯಾಣ ಯೋಜನೆಗಳನ್ನು ನಡೆಸುತ್ತದೆ. ಈ ಯೋಜನೆಗಳ ಮೂಲಕ ಜನರಿಗೆ ಪ್ರಯೋಜನಗಳನ್ನು ಒದಗಿಸಲಾಗುತ್ತದೆ. ಪಡಿತರ ಚೀಟಿ ಹೊಂದಿರುವ ಜನರಿಗೆ ಪ್ರತಿ ತಿಂಗಳು ಅಗ್ಗದ ಪಡಿತರವನ್ನು ನೀಡಲಾಗುತ್ತದೆ, ಇದರಲ್ಲಿ ಗೋಧಿ, ಅಕ್ಕಿಯಂತಹ ವಸ್ತುಗಳನ್ನು ನೀಡಲಾಗುತ್ತದೆ.

ಕೋವಿಡ್ ಸಮಯದಿಂದಲೂ ಜನರಿಗೆ ಉಚಿತ ಪಡಿತರವನ್ನು ಸಹ ನೀಡಲಾಗುತ್ತಿದೆ ಮತ್ತು ಇದೆಲ್ಲವೂ ಪಡಿತರ ಚೀಟಿಗಳ ಮೂಲಕ ನಡೆಯುತ್ತಿದೆ. ಇದರಲ್ಲಿ, ಕುಟುಂಬದ ಪ್ರತಿಯೊಬ್ಬ ಸದಸ್ಯರ ಪ್ರಕಾರ ಪ್ರತಿ ತಿಂಗಳು ಪಡಿತರವನ್ನು ನೀಡಲಾಗುತ್ತದೆ.

ಪಡಿತರ ಚೀಟಿದಾರರ ಕುಟುಂಬದ ಸದಸ್ಯರ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರ್ಪಡೆ ಮಾಡಿದ್ದರೆ ಆನ್‌ ಲೈನ್‌ ಮೂಲಕ ನೀವು ಪಡಿತರ ಚೀಟಿಯಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವಾ? ಅಂತ ಚೆಕ್‌ ಮಾಡಬಹುದು.

ಈಗಾಗಲೇ ರೇಷನ್‌ ಕಾರ್ಡ್‌ ಗೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ರೇಷನ್‌ ಕಾರ್ಡ್‌ ನಲ್ಲಿ ಹೆಸರು ಬಂದಿದೆಯಾ ಅಂತ ಈ ರೀತಿ ಚೆಕ್‌ ಮಾಡಬಹುದು.

ಮೊದಲಿಗೆ https://ahara.kar.nic.in/WebForms/Show_RationCard.aspx ವಿಭಾಗದಲ್ಲಿ ಎಡ ಭಾಗದಲ್ಲಿ ಕಾಣುವ ಈ ಪಡಿತರ ಚೀಟಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಅಲ್ಲಿ ನಿಮಗೆ ವಿತರಣೆಯಾಗದ ಹೊಸ ಪಡಿತರ ಚೀಟಿ ಲಿಸ್ಟ್ ಎಂಬುದು ಕಾಣಿಸುತ್ತದೆ.

ನಂತರ ನೀವು ನಿಮ್ಮ ಜಿಲ್ಲೆ ಗ್ರಾಮ ಹಾಗೂ ಮತದಾರ ವಿವರಗಳನ್ನು ನೀಡಿ ಗೋ ಎಂದು ಕ್ಲಿಕ್ ಮಾಡಿದರೆ ಒಂದು ಲಿಸ್ಟ್ ತೆರೆದುಕೊಳ್ಳುತ್ತದೆ.

ನಂತರ ವಿತರಣೆ ಆಗದೇ ಇರುವ ಹೊಸ ರೇಷನ್ ಕಾರ್ಡ್ ಲಿಸ್ಟ್‌ ಕಾಣುತ್ತದೆ. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ ಸದ್ಯದಲ್ಲಿಯೇ ರೇಷನ್ ಕಾರ್ಡ್ ಬರಲಿದೆ ಎಂದು ಅರ್ಥ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read