ರಥೋತ್ಸವ ವೇಳೆಯಲ್ಲೇ ದುರಂತ: ಚಕ್ರಕ್ಕೆ ಸಿಲುಕಿ ಹೋಂ ಗಾರ್ಡ್ ಸಾವು

ಕಲಬುರಗಿ: ರಥದ ಚಕ್ರಕ್ಕೆ ಸಿಲುಕಿ ಹೋಂ ಗಾರ್ಡ್ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ರಾಮು(28) ಮೃತಪಟ್ಟವರು ಎಂದು ಹೇಳಲಾಗಿದೆ.

ರಾಮು ಬೀದರ್ ಜಿಲ್ಲೆ ಇಟಗಾ ಗ್ರಾಮದವರಾಗಿದ್ದಾರೆ. ಕಲಬುರಗಿ ಶರಣಬಸವೇಶ್ವರ ಜಾತ್ರೆಯಲ್ಲಿ ರಥ ಎಳೆಯುವ ವೇಳೆ ಭಕ್ತರ ಗದ್ದಲ, ನೂಕಾಟ ನಡೆದಿದ್ದು, ಭಕ್ತರನ್ನು ಕಂಟ್ರೋಲ್ ಮಾಡುವಾಗ ದುರಂತ ನಡೆದಿದೆ. ಮತ್ತೊಬ್ಬ ಸಿಬ್ಬಂದಿ ಅಶೋಕ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್.ಜೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read