ನಾಳೆ ಸಂಭವಿಸಲಿದೆ ಈ ವರ್ಷದ ಮೊದಲ ಸೂರ್ಯಗ್ರಹಣ

ಈ ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಅಂದ್ರೆ ಏಪ್ರಿಲ್ 20 ರಂದು ಸಂಭವಿಸಲಿದೆ. ಇದು ಅಪರೂಪದ ಹೈಬ್ರಿಡ್ ಸೂರ್ಯಗ್ರಹಣ ಆಗಿರುತ್ತದೆ.  ನಾಳೆ ಅಮಾವಾಸ್ಯೆಯ ದಿನ ಸಂಭವಿಸುವ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಾಸಾ, “ಏಪ್ರಿಲ್ 20 ರಂದು, ಆಸ್ಟ್ರೇಲಿಯಾ ಮತ್ತು ಆಗ್ನೇಯ ಏಷ್ಯಾದ ಕೆಲವು ಭಾಗ, ಹಿಂದೂ ಮತ್ತು ಪೆಸಿಫಿಕ್ ಮಹಾಸಾಗರಗಳ ಮೇಲೆ ಹೈಬ್ರಿಡ್ ಸೂರ್ಯಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ” ಎಂದು ತಿಳಿಸಿದೆ.

ಗುರುವಾರದ ಸೂರ್ಯಗ್ರಹಣವು ಹೈಬ್ರಿಡ್ ಆಗಿರುತ್ತದೆ. ಏಕೆಂದರೆ ಇದು ಭಾಗಶಃ ಸೂರ್ಯಗ್ರಹಣ ಅಥವಾ ಸಂಪೂರ್ಣ ಸೂರ್ಯಗ್ರಹಣವಾಗಿರುವುದಿಲ್ಲ. ಬದಲಾಗಿ, ಇದು ಎರಡರ ಮಿಶ್ರಣವಾಗಿರುತ್ತದೆ.

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬ೦ದಾಗ ಸೂರ್ಯ ಗ್ರಹಣ ಸ೦ಭವಿಸುತ್ತದೆ. ಗ್ರಹಣವು ನಾಳೆ ಬೆಳಗ್ಗೆ 7 ಗಂಟೆ 4 ನಿಮಿಷಕ್ಕೆ ಸಂಭವಿಸಲಿದ್ದು ಮಧ್ಯಾಹ್ನ 12.29 ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣದ ವೇಳೆ ಸೂರ್ಯನನ್ನು ನೇರವಾಗಿ ನೋಡುವುದು ಅಪಾಯಕಾರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read