Bengaluru : ಮಣಿಪುರ ಹಿಂಸಾಚಾರದ ಪ್ರತಿಭಟನೆ ಮುಗಿಸಿ ತೆರಳುತ್ತಿದ್ದ ಯುವತಿಗೆ ರ್ಯಾಪಿಡೋ ಬೈಕ್ ಚಾಲಕನಿಂದ ಲೈಂಗಿಕ ಕಿರುಕುಳ

ಬೆಂಗಳೂರು: ರ್ಯಾಪಿಡೋದಲ್ಲಿ ರೈಡ್ ಬುಕ್ ಮಾಡಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಪಿಡೊ ಬೈಕ್ ಟ್ಯಾಕ್ಸಿ ಚಾಲಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಪೋಸ್ಟ್ ಗೆ ವೈರಲ್ ಆಗುತ್ತಿದ್ದಂತೆ ಬೆಂಗಳೂರು ಪೊಲೀಸ್ ಇಲಾಖೆ, ಈ ಬಗ್ಗೆ ತನಿಖೆ ನಡೆಸುವಂತೆ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಗೆ ನಿರ್ದೇಶನ ನೀಡಿತ್ತು. ವಾಟ್ಸಾಪ್ನಲ್ಲಿ ಬ್ಲಾಕ್ ಮಾಡಿದ ನಂತರ ಆರೋಪಿ ಕರೆಗಳನ್ನು ಮಾಡುತ್ತಿದ್ದಾನೆ ಎಂದು ಯುವತಿ ಹೇಳಿದ್ದಾರೆ.

ಯುವತಿ ಹೇಳಿದ್ದೇನು..?

“ನಾನು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಮಣಿಪುರ ಹಿಂಸಾಚಾರದ ಪ್ರತಿಭಟನೆಗೆ ಹೋಗಿದ್ದೆ, ಬಳಿಕ ವಾಪಸ್ ಆಗಲು ರ್ಯಾಪಿಡೊ ಆಟೋ ಬುಕ್ ಮಾಡಿದೆ. ಇದು ಕ್ಯಾನ್ಸಲ್ ಆದ ಹಿನ್ನೆಲೆ ರ್ಯಾಪಿಡೋ ಬೈಕ್ ಬುಕ್ ಮಾಡಿದೆ. ಆದರೆ ಚಾಲಕ ಅಚ್ಚರಿ ಎಂಬಂತೆ ಬೇರೆ ಬೈಕಿನಲ್ಲಿ ಬಂದು, ರಾಪಿಡೋ ಬೈಕ್ ಅಪ್ಲಿಕೇಶನ್ನಲ್ಲಿ ನೋಂದಾಯಿಸಲಾದ ಬೈಕ್ ಸೇವೆಯಲ್ಲಿದೆ ಎಂದು ವಿವರಿಸಿದರು. ನಾನು ಈ ಅಪ್ಲಿಕೇಶನ್ ಮೂಲಕ ನನ್ನ ಬುಕಿಂಗ್ ಅನ್ನು ಖಚಿತಪಡಿಸಿ ಬೈಕ್ ಹತ್ತಿದೆ. ನಂತರ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ಗ ಮಧ್ಯ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಒಂದು ಕೈಯಿಂದ ಸವಾರಿ ಮಾಡಲು ಪ್ರಾರಂಭಿಸಿ ಮತ್ತು ಅನುಚಿತವಾಗಿ ವರ್ತಿಸಿದ್ದಾನೆ. (ಬೈಕ್ ಸವಾರಿ ಮಾಡುವಾಗ ಹಸ್ತಮೈಥುನ ಮಾಡಿಕೊಂಡನು). ನನ್ನ ಸುರಕ್ಷತೆಯ ಭಯದಿಂದ, ನಾನು ಮೌನವಾಗಿದ್ದೆ” ಎಂದು ಸಂತ್ರಸ್ತೆ ವಿವರಿಸಿದರು.

ಬೈಕ್ ಸವಾರಿ ಮುಗಿದ ನಂತರ, ಅವರು ನಿರಂತರವಾಗಿ ನನಗೆ ಕರೆ ಮಾಡಲು ಯತ್ನಿಸಿದ್ದಾನೆ. ಹಾಗೂ ವಾಟ್ಸಾಪ್ನಲ್ಲಿ ಸಂದೇಶ ಕಳುಹಿಸಲು ಪ್ರಾರಂಭಿಸಿದರು. ಕಿರುಕುಳವನ್ನು ನಿಲ್ಲಿಸಲು ನಾನು ಅವನ ನಂಬರ್ ಬ್ಲ್ಯಾಕ್ ಮಾಡಿದೆ. ಆದರೆ ಅವನು ಬೇರೆ ಬೇರೆ ಸಂಖ್ಯೆಯಿಂದ ಕರೆ ಮಾಡಿ ಕಿರುಕುಳ ನೀಡಿದ್ದಾನೆ ಎಂದು ಯುವತಿ ಹೇಳಿದ್ದಾಳೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಯುವತಿ ಪೋಸ್ಟ್ ಮಾಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read